ಮಾಳಮಾರುತಿಗೆ ಗಡ್ಡೆಕರ್, HESCOM vigilanceಗೆ ಕಲ್ಯಾಣಶೇಟ್ಟಿ , ಮುಧೋಳ ಸರ್ಕಲ್ ಇನ್ಸ್ಪೆಕ್ಟರ್ ಆಗಿ SI ಗುರುನಾಥ ನೇಮಕ ..!
ಸೇಲ್ಪಿ ತೆಗೆದುಕೊಂಡು ಬೆಳಗಾವಿಯಿಂದ ಕಾಲ್ಕಿತ್ತ ಇನ್ಸ್ಪೆಕ್ಟರ್ ಕಾಲಿಮಿರ್ಚಿ..!
ಬೆಳಗಾವಿ : ಕರ್ನಾಟಕ ಸರ್ಕಾರ ಗೃಹ ಇಲಾಖೆ 120 ಇನ್ಸ್ಪೆಕ್ಟರ್ ಗಳ ವರ್ಗಾವಣೆ ಮಾಡುವ ಮೂಲಕ ಇಲಾಖೆಯ ಆಡಳಿತದಲ್ಲಿ ಬದಲಾವಣೆ ಮಾಡಲು ಪ್ರಯತ್ನಿಸಿದೆ.
ಇದರಲ್ಲಿ ಪ್ರಮುಖವಾಗಿ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ ದಿನದಂದು ಮಾಳಮಾರುತಿ ಠಾಣೆಯ ಇನ್ಸ್ಪೆಕ್ಟರ್ ಕಾಲಿಮಿರ್ಚಿ ಅವರಿಗೆ ಯಾವುದೇ ಸ್ಥಳ ತೋರಿಸದೆ ಅವರ ಸ್ಥಳಕ್ಕೆ ಬೆಳಗಾವಿ ನಗರ CEN ಇನ್ಸ್ಪೆಕ್ಟರ್ ಬಾವುದ್ದಿನ ಗಡ್ಡೆಕರ ಅವರನ್ನು ನೇಮಿಸಿ ಆದೇಶಿದೆ.
ಇನ್ನೂ ಕಾಕತಿ ಠಾಣೆಯಲ್ಲಿ ಸೇವೆ ಸಲ್ಲಿಸಿ ಖಡಕ ಅಧಿಕಾರಿ ಎಂದು ಹೆಸರು ವಾಸಿಯಾಗಿದ್ದ ಇನ್ಸ್ಪೆಕ್ಟರ್ ಎಸ್ ಐ ಗುರುನಾಥ ಅವರನ್ನು ಮುಧೋಳ ಸರ್ಕಲ್ ಇನ್ಸ್ಪೆಕ್ಟರ್ ಆಗಿ ನೇಮಿಸಿಲಾಗಿದೆ.
ಮಾರಿಹಾಳ ಠಾಣೆಯಿಂದ ವರ್ಗಾವಣೆಗೊಂಡಿದ್ದ ಇನ್ಸ್ಪೆಕ್ಟರ್ ಕಲ್ಯಾಣಶೇಟ್ಟಿ ಅವರನ್ನು ಬೆಳಗಾವಿ HESCOM Vigilence ಗೆ ವರ್ಗಾವಣೆ ಮಾಡಲಾಗಿದೆ.
ಪಿಕ್ಸ್ ಆಗಿತ್ತು ಗಡ್ಡೆಕರ ಪೊಸ್ಟಿಂಗ್..!
ಈ ಮದ್ಯೆ ಮಾಳಮಾರುತಿ ಠಾಣೆಗೆ ಹಿಂದೆ PSI ಆಗಿ ಸೇವೆ ಸಲ್ಲಿಸಿ ಈಗ ಇನ್ಸ್ಪೆಕ್ಟರ್ ಆಗಿರುವ ಬಾವುದ್ದಿನ ಗಡ್ಡೆಕರ ಈ ಠಾಣೆಗೆ ಬರುವುದು ಬಹುತೇಕ ಖಚಿತವಾಗಿತ್ತು ಎಂದು ಬಲ್ಲ ಮೂಲಗಳ ಪ್ರಕಾರ ತಿಳಿದಿತ್ತು. ಆದರೆ ಸೇಲ್ಪಿ ತೆಗೆದುಕೊಂಡು ಪಿಐ ಕಾಲಿಮಿರ್ಚಿ ಬಲಿಪಶು ಆಗಿದ್ದು ವಿಪರ್ಯಾಸ.


