ಬೆಳಗಾವಿ: ಕೆ.ಎಲ್.ಎಸ್ ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ, 2025–26 ನೇ ಶೈಕ್ಷಣಿಕ ವರ್ಷದ ಜಿಮಖಾನಾ ಸಂಘವನ್ನು ಬುಧವಾರ ನವೆಂಬರ್ 5ರಂದು ಉದ್ಘಾಟಿಸಲಾಯಿತು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಸಂತೋಷ ಕಾಮಗೌಡ ವೃತ್ತಿಯ ಕುರಿತು ಮಾರ್ಗದರ್ಶನ ನೀಡಿದರು ವೃತ್ತಿಪರ ನೀತಿಯು ಕಾನೂನು ವಿದ್ಯಾರ್ಥಿಗಳಿಗೆ ಅತ್ಯಂತ ಮುಖ್ಯ ಎಂದರು. ವಿದ್ಯಾರ್ಥಿಗಳು ಅದನ್ನು ಅನುಸರಿಸಬೇಕು, ತಮ್ಮ ಕೆಲಸದ ಬಗ್ಗೆ ಆಸಕ್ತಿ ಮತ್ತು ಧನಾತ್ಮಕ ಮನೋಭಾವವನ್ನು ಹೊಂದಿರಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಕೀಲ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಆರ್. ಎಸ್. ಮುತಾಲಿಕ ಮಾತನಾಡಿ, ವಿದ್ಯಾರ್ಥಿಗಳಿಗೆ ಓದು, ಕೌಶಲ್ಯದ ಮಹತ್ವವನ್ನು ವಿವರಿಸಿ, ಕಾನೂನು ಕ್ಷೇತ್ರದ ವೃತ್ತಿ ಅವಕಾಶಗಳ ಬಗ್ಗೆ ಮಾತನಾಡಿದರು.
ಜಿಮ್ಖಾನಾ ಸಂಘದ ಅಧ್ಯಕ್ಷ ಡಾ. ಡಿ. ಪ್ರಸನ್ನಕುಮಾರ್,
ಸ್ವಾಗತಿಸಿ ಕಾಲೇಜಿನ ಸಾಧನೆಗಳನ್ನು ವಿವರಿಸಿದರು. ಸಹಾಯಕ ದೈಹಿಕ ನಿರ್ದೇಶಕ ಅಮಿತ್ ಜಾಧವ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಪ್ರಾಂಶುಪಾಲ ಡಾ. ಎಚ್. ಎಚ್. ಹವಾಲ್ದಾರ್, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.


