ಬೆಳಗಾವಿ : ಇಲ್ಲಿಯ ಪೋಕ್ಸೊ ನ್ಯಾಯಾಲಯ ಮಂಗಳವಾರ ಸಹ ಮತ್ತೊಬ್ಬ ಅತ್ಯಾಚಾರಿಗೆ ಘೋರ ಶಿಕ್ಷೆ ನೀಡಿ ಮಹತ್ವದ ತೀರ್ಪು ಹೊರಡಿಸಿದೆ.
ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿತನಿಗೆ 30 ವರ್ಷಗಳ ಕಠಿಣ ಶಿಕ್ಷೆ, ರೂ.10,000 ದಂಡ ವಿಧಿಸಿ ಜಿಲ್ಲಾ ಪೋಕ್ಸೊ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.
ಸವದತ್ತಿ ತಾಲೂಕು ಅರ್ಟಗಲ್ ನಿವಾಸಿ ಶಿವಪ್ಪ ಭೀಮಪ್ಪ ತ್ಯಾಪಿ (26) ಶಿಕ್ಷೆಗೊಳಗಾದ ಆರೋಪಿ.
ನೊಂದ ಬಾಲಕಿ ಅಪ್ರಾಪ್ತ ವಯಸ್ಸಿನವಳು ಎಂದು ಗೊತ್ತಿದರೂ 11-11-2020 ರಂದು ಆರೋಪಿ ಶಿವಪ್ಪ ಭೀಮಪ್ಪ ತ್ಯಾಪಿ ಇವನ್ನು ಬಾಲಕಿ ತನ್ನ ಮನೆಯ ಹಿಂಬದಿಯಲ್ಲಿ ಮೂತ್ರವಿಸರ್ಜನೆ ಮಾಡಲು ಹೋದಾಗ ಆರೋಪಿತ ಹಿಂಬದಿಯಿಂದ ಹೋಗಿ ಆಕೆಯ ಬಾಯಿಗೆ ಟವೆಲ್ ಸುತ್ತಿ ಹಿಂಬದಿಯಲ್ಲಿದ್ದ ಕಬ್ಬಿನ ತೋಟಕ್ಕೆ ಎಳೆದುಕೊಂಡು ಹೋಗಿ ಒತ್ತಾಯಪೂರ್ವಕವಾಗಿ ಅತ್ಯಾಚಾರವೆಸಗಿದ್ದ.
ಸವದತ್ತಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು. ಈ ಅಪರಾದಕ್ಕಾಗಿ ದಾಖಲಾಧಿಕಾರಿ ಎಂ.ಜಿ. ಮಾರಿಹಾಳ ಅವರು ಪ್ರಕರಣ ದಾಖಲಿಸಿಕೊಂಡಿದ್ದರು. ಮುಂದಿನ ಕ್ರಮಕ್ಕಾಗಿ ತನಿಖಾಧಿಕಾರಿ ಮಂಜುನಾಥ ಐ ನಡುವಿನಮನಿ ಅವರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯ-01 ಬೆಳಗಾವಿ ಈ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ಪ್ರಕರಣವನ್ನು ವಿಚಾರಣೆ ಮಾಡಿ, ಒಟ್ಟು 8 ಸಾಕ್ಷಿಗಳ ವಿಚಾರಣೆ ಮೇಲಿಂದ ಹಾಗೂ 30 ದಾಖಲೆಗಳು ಹಾಗೂ 16 ಮುದ್ದೆಮಾಲುಗಳ ಆಧಾರದ ಮೇಲಿಂದ ಆರೋಪಿ ಶಿವಪ್ಪ ಭೀಮಪ್ಪ ತ್ಯಾಪಿ ಇವನ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು ತೀರ್ಪು ನೀಡಿದ್ದಾರೆ.
ಆರೋಪಿತನಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ.10.000/- ದಂಡ ವಿಧಿಸಿದ್ದು, ದಂಡದ ಮೊತ್ತ ತುಂಬದೆ ಇದ್ದ ಕಾಲಕ್ಕೆ 1 ವರ್ಷಗಳ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.
ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂ. 4 ಲಕ್ಷಗಳನ್ನು ಪರಿಹಾರಧನವನ್ನು ಪಡೆಯಲು ನ್ಯಾಯಾಲಯ ಆದೇಶಿಸಿದೆ. ಪರಿಹಾರ ಹಣವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ 5 ವರ್ಷಗಳವರೆಗೆ ಮುದ್ದತ್ತು ಠೇವಣಿಯಾಗಿ ಇಡಲು ನ್ಯಾಯಾಲಯ ಆದೇಶಿಸಿದೆ.
ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಲ್. ವಿ.ಪಾಟೀಲ ಪ್ರಕರಣವನ್ನು ನಡೆಸಿ ವಾದ ಮಂಡಿಸಿದ್ದರು.


