ಬೆಳಗಾವಿ : ಬೆಂಗಳೂರಿನ ಚಿತ್ರಸಂತೆಯಿಂದ ಸಂಗೀತ ಕ್ಷೇತ್ರದಲ್ಲಿ 17 ವರ್ಷಗಳಿಂದ ಮಕ್ಕಳಿಗೆ ನಾದಸುಧಾ ಸುಗಮ ಸಂಗೀತಾ ಶಾಲೆಯ ಮೂಲಕ ಸಂಗೀತವನ್ನು ಧಾರೆಯುತ್ತಿರುವ ಬೆಳಗಾವಿಯ ಡಾ| ಎಂ ಎನ್ ಸತ್ಯನಾರಾಯಣ ಅವರಿಗೆ ಬೆಂಗಳೂರಿನ ಹೈಡ್ ಪಾರ್ಕ್ ನಲ್ಲಿ ಆಯೋಜಿಸಿದ್ದ ಹೆಮ್ಮೆಯ ಸಾಧಕರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ “”ಬೆಸ್ಟ್-ಮ್ಯುಸಿಷಿಯನ್”” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ 35ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ಸಂಯುಕ್ತ ಹೊರನಾಡು ಅವರು ಮಾತನಾಡುತ್ತಾ ಕರ್ನಾಟಕದಾದ್ಯoತ, ಬೇರೆ ಬೇರೆ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಮಾಡಿರುವ ಸಾಧಕರನ್ನು ಗುರುತಿಸಿ ಇಂಥ ದೊಡ್ಡ ವೇದಿಕೆಯಲ್ಲಿ ಒಂದು ಗೂಡಿಸಿ ಸನ್ಮಾನಿಸಿ ಗೌರವಿಸುತ್ತಿರುವುದು ಚಿತ್ರಸಂತೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹಾಡಿ ಹೊಗಳಿದರು.
ಈ ಕೆಲಸ ನನಗೆ ಒದಗಿರುವುದು ನನ್ನ ಜೀವಮಾನದಲ್ಲೇ ಮೊದಲ ಬಾರಿ ಎಂದು ಹೆಮ್ಮೆಯಿಂದ ಅಭಿಪ್ರಾಯ ಪಟ್ಟರು.
ಬೇರೆ ಬೇರೆ ಕ್ಷೇತ್ರಗಳಲ್ಲಿ 25 ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ಪ್ರಸಿದ್ಧ ನಟಿ ಸುಧಾ ಬೆಳವಾಡಿ ಅವರು ಸೇರಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಗಿರಿ ಗೌಡರ್ ಅವರ ಚಿತ್ರಸಂತೆ ಯ 157 ನೇ ಸಂಚಿಕೆ ಬಿಡುವ ಬಿಡುಗಡೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸುಮಾರು 150 ಕ್ಕೂ ಹೆಚ್ಚು ಜನ ಸೇರಿದ್ದ ಈ ಸಮಾರಂಭ ಚಿಕ್ಕದಾಗಿ ಚೊಕ್ಕದಾಗಿ ವಿಜೃಂಭಣೆಯಿಂದ ಜರುಗಿತು.


