ಬೆಳಗಾವಿ : ನಗರದ ಕೆ ಎಲ್ ಇ ಸಂಸ್ಥೆಯ ರಾಜಾ ಲಖಮಗೌಡ ಮಹಾವಿದ್ಯಾಲಯವು ಮಹಿಳಾ ಟೇಬಲ್ ಟೆನ್ನಿಸ್ ತಂಡವು ಪ್ರಥಮ ಸ್ಥಾನ ಪಡೆದುಕೊಂಡಿದೆ. ಪುರುಷರ ಟೇಬಲ್ ಟೆನ್ನಿಸ್ ತಂಡವು ಮೂರನೇ ಸ್ಥಾನ ಗಳಿಸಿದೆ. ಈ ಸಾಧನೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಗಲ್ ಝೋನ್ ಅಂತರ್-ಕಾಲೇಜು ಟೇಬಲ್ ಟೆನ್ನಿಸ್ ಪಂದ್ಯಾವಳಿ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ನಾಗಠಾಣ ನಿಡಗುಂದಿದಲ್ಲಿ ಆಯೋಜಿಸಲಾಗಿತ್ತು.ರಾಜಾ ಲಖಮಗೌಡ ವಿಜ್ಞಾನ ಸ್ವಾಯತ್ತ ಮಹಾವಿದ್ಯಾಲಯದ ಸ್ಥಾನಿಕ ಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಲಿಂಗಗೌಡ ವಿ ದೇಸಾಯಿ, ಸದಸ್ಯ ಗಿರೀಶ ಕತ್ತಿಶೆಟ್ಟಿ ಹಾಗೂ ಪಿ ಎಂ ಬಾಳೆಕುಂದ್ರಿ, ಕಾಲೇಜಿನ ಪ್ರಾಚಾರ್ಯೆ ಡಾ. ಜೆ. ಎಸ್. ಕವಳೇಕರ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಡಾ.ಶಿವಾನಂದ ಬುಲಬುಲಿ ಎರಡೂ ತಂಡಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.


