
ಖಾನಾಪುರ: ಖಾನಾಪುರದಲ್ಲಿ ಆರ್ ಎಸ್ ಎಸ್ ಪಥ ಸಂಚಲನ ನಾಗರಿಕರ ಗಮನ ಸೆಳೆಯಿತು.
ಆರ್ ಎಸ್ ಎಸ್ ಸಂಘಟನೆ ಹುಟ್ಟಿ ನೂರು ವರ್ಷ ಸಂದ ಹಿನ್ನೆಲೆಯಲ್ಲಿ ಈ ವರ್ಷ ನಡೆದ ಪಥ ಸಂಚಲನ ವಿಶೇಷ ಮೆರುಗು ಪಡೆದುಕೊಂಡಿತು. ಶಾಸಕ ವಿಠ್ಠಲ ಹಲಗೇಕರ ಸೇರಿದಂತೆ ಆರ್ ಎಸ್ ಎಸ್ ಕಾರ್ಯಕರ್ತರು ಹಾಗೂ ಗಣ್ಯಮಾನ್ಯರು ಭಾಗವಹಿಸಿ ದೇಶಪ್ರೇಮ, ಶಿಸ್ತು ಮತ್ತು ಸಂಘಟನೆಯ ಸಂದೇಶವನ್ನು ನೀಡಿದರು.
ಸಂಜೆ 4 ಕ್ಕೆ ಖಾನಾಪುರದ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಮೈದಾನದಿಂದ ಆರಂಭವಾದ ಪಥ ಸಂಚಲನ ಪಟ್ಟಣದ ವಿವಿಧ ಮಾರ್ಗಗಳಲ್ಲಿ ಸಂಚರಿಸಿತು. ಬಾಳೆವಾಡಿ ಮಠದ ಶ್ರೀ ಸಿದ್ದನಾಥ ಸ್ವಾಮೀಜಿ ತೊಲಗಿ, ಶ್ರೀ ವೈಷ್ಣನಾಥ ಶಿವಾಚಾರ್ಯ ಸ್ವಾಮೀಜಿ, ಅವರೊಳ್ಳಿಯ ಶ್ರೀ ಚನ್ನಬಸವ ದೇವರು, ನಂದಗಡದ ಮಾರುತಿ ಮಹಾರಾಜರು, ತೋಪಿನಕಟ್ಟಿ ಸಿದ್ದಾಶ್ರಮದ ಶ್ರೀ ರಾಮದಾಸ ಮಹಾರಾಜರು ಉಪಸ್ಥಿತರಿದ್ದರು.



