ಬೆಳಗಾವಿ : ಸರಕು ಮತ್ತು ಸೇವಾ ತೆರಿಗೆ ದರಗಳು ದೇಶದ ಆರ್ಥಿಕತೆಯ ದಿಕ್ಸೂಚಿ. ಅದರ ಇಳಿಕೆಯಿಂದ ಜೀವನವೆಚ್ಛ ಕಡಿಯಾಗಲಿದೆಯೆಂದು ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರವಿಭಾಗದ ಪ್ರಾಧ್ಯಾಪಕ ಡಾ. ಮನೋಜ ಡೊಳ್ಳಿ ಅಭಿಪ್ರಾಯಪಟ್ಟರು.
ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾದ್ಯಾಲಯದ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಜಿಎಸ್ಟಿ ವಿಷಯದ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಭಾರತದಲ್ಲಿ ಜಿಎಸ್ಟಿ ಅನುಷ್ಠಾನವಾಗುವ ಪೂರ್ವದಲ್ಲಿ ತೆರಿಗೆಗಳು ಗೊಂದಲಮಯವಾಗಿತ್ತು. ಉದ್ದಿಮೆದಾರರು ಇಲ್ಲಿನ ತೆರಿಗೆ ವ್ಯವಸ್ಥೆಗೆ ರೋಸಿಹೋಗಿದ್ದರು. ಜಿಎಸ್ಟಿ ಅನುಷ್ಠಾನಕ್ಕೆ ಬಂದಾಗ ಜಿಎಸ್ಟಿ ದರ ಹೆಚ್ಚಳವಿದ್ದು, ಸಂಗ್ರಹವಾಗುವ ಕರ ಕೂಡ ಕಡಿಮೆಯಿತ್ತು. ಕ್ರಮೇಣ ಜಿಎಸ್ ಟಿ ಸಂಗ್ರಹ ಏರುತ್ತಾ ಸಾಗಿ ಇಂದು ಎರಡು ಲಕ್ಷ ಕೋಟಿಗೆ ತಲುಪಿದೆ. ಇಂತಹ ಸಂದರ್ಭದಲ್ಲಿ ಇಳಿಸಬೇಕಾದ ತುರ್ತು ಕೂಡ ಇತ್ತು.
ತೆರಿಗೆಯಿಂದ ದೇಶದ ಬೊಕ್ಕಸ ತುಂಬಬೇಕು. ಆದರೆ ಅದೊಂದೇ ಮುಖ್ಯವಲ್ಲ. ಅದರ ಜೊತೆಗೆ ತೆರಿಗೆ ಗ್ರಾಹಕರಿಗೆ ಭಾರವಾಗದಂತಿರಬೇಕು. ಈಗ ಕೇಂದ್ರ ಸರ್ಕಾರ ಜಿಎಸ್ಟಿ ಪರಿಸ್ಕೃತ ಗೊಳಿಸಿ, ತೆರಿಗೆ ದರಗಳನ್ನು ಗಮನಾರ್ಹಗಿ ಇಳಿಸಿ, ಅತ್ಯಂತ ಸರಳೀಕರಣಗೊಳಿಸಿದೆ. ಇದು ನೇರವಾಗಿ ಗ್ರಾಹಕರಿಗೆ ಅನುಕೂಲವಾಗಿದೆ. ಜೊತೆಗೆ ದೇಶದ ಆರ್ಥಿಕತೆಗೂ ಹೆಚ್ಚು ಬಲವನ್ನು ತಂದು ಕೊಟ್ಟಿದೆ. ಪ್ರಸ್ತುತ ಮೂರು ಹಂತದ ತೆರಿಗೆಗಳಿವೆ. ಅದರಲ್ಲಿ ಮೂರನೇ ಹಂತದ ತೆರಿಗೆ ಐಷಾರಾಮಿ ವಸ್ತು, ಪಾನೀಯಗಳಿಗೆ ಸಂಬಂಧಿಸಿದೆ. ಇನ್ನೂ ಅನೇಕ ವಸ್ತುಗಳು ತೆರಿಗೆಯಿಂದ ಮುಕ್ತವಾಗಿವೆ. ಇದು ತೆರಿಗೆಯಲ್ಲಿ ಬಹುದೊಡ್ಡ ಸುಧಾರಣೆ. ಇದರಿಂದ ಉದ್ಯಮವರ್ಗವು ಹೆಚ್ಚು ಚೇತರಿಕೆ ಕಾಣಲಿದೆ. ಜೊತೆಗೆ ಇನ್ನಷ್ಟು ವಿದೇಶಿ ನೇರ ಬಂಡವಾಳ ಹರಿದು ಬರಲಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಉಪಪ್ರಾಚಾರ್ಯ ಮತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರ್ಜುನ ಜಂಬಗಿ ಮಾತನಾಡಿ, ದೇಶದ ಅರ್ಥವ್ಯವಸ್ಥೆ ನಿಂತಿರುವುದೇ ತೆರಿಗೆಗಳಿಂದ. ಆದರೆ ತೆರೆಗೆ ಗ್ರಾಹಕರಿಗೂ ಮತ್ತು ಉದ್ಯಮಕ್ಕೆ ಪೂರಕವಾಗಿರಬೇಕು. ಮುಂದೆ ಜಿಎಸ್ಟಿಯಿಂದ ಇನ್ನಷ್ಟು ಸರಳೀಕರಣ ವಾಗಲಿದೆ. ಪರಿಷ್ಕೃತ ಜಿಎಸ್ ಟಿಯು ತೆರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ. ಗ್ರಾಹಕರ ನಿರೀಕ್ಷೆಯನ್ನು ತಲುಪಿದೆ. ಸರಕಾರ ಇದರಿಂದ ಸಾಕಷ್ಟು ನಷ್ಟ ಅನುಭವಿಸಿದರು ಗ್ರಾಹಕರ ಹಿತದೃಷ್ಟಿಯಿಂದ ಇದನ್ನು ಪರಿಷ್ಕರಿಸಿದೆ ಎಂದರು.
ಅರ್ಥಶಾಸ್ತ್ರ ಉಪನ್ಯಾಸಕ ಡಾ. ಕುಮಾರ ಬಡಿಗೇರ ಹಾಗೂ ಮಹಾವಿದ್ಯಾಲಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಮಾಶಿಹಾ ಮದರಖಂಡಿ ಸ್ವಾಗತಿಸಿದರು. ಫಜಿಲಾ ಪಠಾಣ ವಂದಿಸಿದರು. ಮೀನಾಜ್ ಉಮರಖಾನ್ ನಿರೂಪಿಸಿದರು.


