ಬೆಳಗಾವಿ: ಬೆಳಗಾವಿಯಲ್ಲಿ ಸಂಭ್ರಮೋತ್ಸಾಹದಿಂದ ದೀಪಾವಳಿ ಹಬ್ಬದ ಆಚರಣೆ ಸಂಪನ್ನಗೊಂಡಿತು. ಹಿಂದುಗಳಲ್ಲಿ ಬಹುದೊಡ್ಡ ಹಬ್ಬವಾಗಿ ಪರಿಗಣಿಸಲ್ಪಟ್ಟಿರುವ ದೀಪಾವಳಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.
ಈ ಹಬ್ಬಕ್ಕಾಗಿ ವಾರಗಳ ಕಾಲ ಬೆಳಗಾವಿಯ ಮಾರುಕಟ್ಟೆ ಪ್ರದೇಶ ಜನಜಂಗುಳಿಯಿಂದ ಕೂಡಿತ್ತು, ಅದರಲ್ಲೂ ವಿಶೇಷವಾಗಿ ಲಕ್ಷ್ಮಿ ಪೂಜೆ ಖರೀದಿ ಜೋರಾಗಿ ನಡೆದಿತ್ತು. ವ್ಯಾಪಾರಿಗಳಿಗೆ ದೀಪಾವಳಿ ಅತ್ಯಂತ ಹೆಚ್ಚು ಲಾಭ ತರುವ ಹಬ್ಬವಾಗಿದೆ. ಚಿನ್ನಾಭರಣಗಳು, ಹೂವು, ಹಣ್ಣು, ಅಲಂಕಾರಿಕ ವಸ್ತುಗಳ ಮಾರಾಟ ಈ ಬಾರಿಯೂ ವ್ಯಾಪಾರಿಗಳಿಗೆ ಭರ್ಜರಿ ಲಾಭ ತಂದು ಕೊಟ್ಟಿರುವುದನ್ನು ಮಾರುಕಟ್ಟೆಯಲ್ಲಿ ನೆರೆದ ಜನಸಮೂಹ ಸಾಬೀತುಪಡಿಸಿತು. ಈ ಬಾರಿ ದೀಪಾವಳಿಗೆ ವರುಣ ತುಸು ಕೃಪೆ ತೋರಿದ್ದ. ಬುಧವಾರ ರಾತ್ರಿ ಮಾತ್ರ ಮಳೆ ಸುರಿಯಿತು. ಹಬ್ಬದ ಪ್ರಯುಕ್ತ ಮಕ್ಕಳು ಹಾಗೂ ಯುವಕರು ಪಟಾಕಿಗಳನ್ನು ಸಿಡಿಸಿ ಸಂಭ್ರಮಪಟ್ಟರು.
ಬೆಂಗಳೂರು, ಪುಣೆ, ಮುಂಬೈ ಸೇರಿದಂತೆ ವಿವಿಧ ನಗರಗಳಿಗೆ ಉದ್ಯೋಗ ನಿಮಿತ್ತ ತೆರಳಿದ್ದ ಬೆಳಗಾವಿ ಜನ ತವರಿಗೆ ಆಗಮಿಸಿ ತಮ್ಮ ಕುಟುಂಬಸ್ಥರೊಂದಿಗೆ ಹಬ್ಬ ಆಚರಿಸಿ ಸಂತಸ ಪಟ್ಟರು.
ಬೆಳಗಾವಿಯಲ್ಲಿ ಸಂಭ್ರಮೋತ್ಸವದಿಂದ ದೀಪಾವಳಿ ಸಂಪನ್ನ ಅತಿ ದೊಡ್ಡ ಹಬ್ಬಕ್ಕೆ ತೆರೆ
