ಬೆಳಗಾವಿ:ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಗಡಿನಾಡು ಕನ್ನಡಿಗರ ಸೇನೆಯ ರಾಜ್ಯ ಘಟಕದ ಉದ್ಘಾಟನೆ ಸಮಾರಂಭ ಗುರುವಾರ ಅ.23 ರಂದು ಬೆಳಗಾವಿಯ ಕಿತ್ತೂರು ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಮುಂಜಾನೆ 10.30 ಕ್ಕೆ ನೆರವೇರಲಿದೆ.
ಶ್ರೀ ನಿಶ್ಚಲ ಸ್ವರೂಪ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯುವ ಈ ಸಮಾರಂಭದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಹಾಗೂ ಗೋಕಾಕದ ಶಾಸಕ ರಮೇಶ ಜಾರಕಿಹೊಳಿ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಹಾಗೂ ರಾಜ್ಯ ಕೆಪಿಸಿಸಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ, ಮಾಜಿ ಶಾಸಕ ಅನೀಲ ಬೆನಕೆ, ವಿಮಲ ಪೌಂಡೇಶನ್ ಅಧ್ಯಕ್ಷ ಕಿರಣ ಜಾಧವ, ಅಶೋಕಕುಮಾರ ಅಸೋದೆ, ಗುರುದೇವ ಪಾಟೀಲ, ಶಿವಾಜಿ ಕಾಗಣಿಕರ, ಹಾಗೂ ರಾಮಣ್ಣ ಗುಳ್ಳಿ ಆಗಮಿಸಲಿದ್ದಾರೆ ಎಂದು ಗಡಿನಾಡ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಡಿನಾಡು ಕನ್ನಡಿಗರ ಸೇನೆ ಉದ್ಘಾಟನೆ ಗುರುವಾರ
