ಬೆಳಗಾವಿ : ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ರಾಮದುರ್ಗದಿಂದ ಮಲ್ಲಣ್ಣ ಯಾದವಾಡ 35 ಮತ, ನಿಪ್ಪಾಣಿಯಿಂದ ಚಿಕ್ಕೋಡಿಯ ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ 71 ಮತ ಪಡೆದು ಗೆಲುವು ಸಾಧಿಸಿದರೆ ಅವರ ಎದುರಾಳಿ ಉತ್ತಮ್ ಪಾಟೀಲ್ ಕೇವಲ 55 ಮತ ಪಡೆದಿದ್ದಾರೆ. ಅಪ್ಪ ಸಾಹೇಬ ಕುಲಗುಡೆ 120 ಮತ ಪಡೆದಿದ್ದಾರೆ.
ಹುಕ್ಕೇರಿಯಲ್ಲಿ ರಮೇಶ್ ಕತ್ತಿ 59 ಮತ ಪಡೆದರೆ ಅವರ ಎದುರಾಳಿ ರಾಜೇಂದ್ರ ಪಾಟೀಲ್ ಕೇವಲ 30 ಮತ ಪಡೆದುಕೊಂಡಿದ್ದಾರೆ.
ಕಿತ್ತೂರಿನಲ್ಲಿ ನಾನಾ ಸಾಹೇಬ್ ಮತ್ತು ವಿಕ್ರಂ ಇನಾಮ್ದಾರ್ ಅವರು ತಲಾ 15 ಮತಗಳ ಮೂಲಕ ಸಮಬಲ ಸಾಧಿಸಿದ್ದಾರೆ. ಬೈಲಹೊಂಗಲದಲ್ಲಿ ವಿ ಐ ಪಾಟೀಲ್ ಅವರಿಗೆ 20ಮತಗಳು ಮತ್ತು ಮಹಾಂತೇಶ್ ದೊಡ್ಡ ಗೌಡರ್ ಅವರಿಗೆ 53 ಮತಗಳು ಲಭಿಸಿವೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಜಯಭೇರಿ
ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಜಯಭೇರಿ ಬಾರಿಸಿದ್ದಾರೆ. ಅವರು 122 ಮತ ಪಡೆದು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮತ್ತೆ ತಮ್ಮ ಹಿಡಿತ ಸಾಧಿಸಿದ್ದಾರೆ.