ಬೆಳಗಾವಿ: ಕೆ.ಎಲ್.ಎಸ್ ಆರ್.ಎಲ್. ಕಾನೂನು ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶ ಸೈಬರ್ ಕಾನೂನುಗಳ ಕುರಿತು ಸಂವಾದವನ್ನು ಆಯೋಜಿಸಿತ್ತು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಉತ್ಸಾಹದಿಂದ ಭಾಗವಹಿಸಿದರು. ಸುಮಾರು 60 ಮಂದಿ ವಿದ್ಯಾರ್ಥಿಗಳು ಸೈಬರ್ ಅಪರಾಧಗಳು ಮತ್ತು ಸಾಮಾಜಿಕ ಮಾಧ್ಯಮ, ಡೇಟಾ ಗೌಪ್ಯತೆ, ಹಾಗೂ ಭಾರತದಲ್ಲಿನ ಸೈಬರ್ ಸುರಕ್ಷತಾ ನೀತಿಗಳ ಬಗ್ಗೆ ಪಾವರ್ಪಾಯಿಂಟ್ ಪ್ರಸ್ತುತಿಗಳನ್ನು ನೀಡಿದರು.
ಗೋಗಟೆ ವಾಣಿಜ್ಯ ಕಾಲೇಜಿನ ಪ್ರೊ. ನಯನಾ ರೈಚೂರ್ ಹಾಗೂ ವಕೀಲ ಕೃಷ್ಣಕುಮಾರ್ ಜೋಶಿ ಅವರು ಪ್ರಸ್ತುತಿಗಳನ್ನು ಮೌಲ್ಯಮಾಪನ ಮಾಡಿ, ಉತ್ತಮ ಸಂಶೋಧನೆ ಹಾಗೂ ವಿಶ್ಲೇಷಣಾತ್ಮಕ ದೃಷ್ಟಿಕೋನಕ್ಕಾಗಿ ವಿದ್ಯಾರ್ಥಿಗಳನ್ನು ಮೆಚ್ಚಿದರು.
ಗುಂಪು ವಿಭಾಗದಲ್ಲಿ ನಾಗಶ್ರೀ ಮತ್ತು ನೇತ್ರಾವತಿ ಪ್ರಥಮ ಸ್ಥಾನ ಪಡೆದರೆ, ಪ್ರವೀಣ ಕುಮಾರ್ ಮತ್ತು ವಿನಾಯಕ ದ್ವಿತೀಯ ಸ್ಥಾನ ಪಡೆದರು. ಅರ್ಪಿತ ಪಾಟೀಲ್ ಮತ್ತು ಭೂಮಿ ಭಟ್ ತೃತೀಯ ಸ್ಥಾನ ಸಾಧಿಸಿದರು.
ವೈಯಕ್ತಿಕ ವಿಭಾಗದಲ್ಲಿ ನಂದಾ ದೋಳೇಕರ್ ಮೊದಲ ಸ್ಥಾನ ಪಡೆದರು, ಮಹೇಕ್ ಎನ್ ದ್ವಿತೀಯ ಸ್ಥಾನ ಹಾಗೂ ಅದ್ವಯ ಸಂತೋಷಿ ತೃತೀಯ ಸ್ಥಾನ ಗಳಿಸಿದರು.
ಪ್ರಾಂಶುಪಾಲ ಡಾ. ಎ.ಎಚ್. ಹವಾಲ್ದಾರ್ ಸ್ವಾಗತಿಸಿದರು. ಸಂಯೋಜಕಿ ಡಾ. ಸಮೀನಾ ನಾಹಿದ್ ಬೇಗ್ ವಂದಿಸಿದರು.