ಬೆಳಗಾವಿ : ಸ್ವಾಮಿ ವಿವೇಕಾನಂದರು ಬೆಳಗಾವಿಗೆ ಆಗಮಿಸಿದ್ದ 133 ನೇ ವರ್ಷದ ಸಂಭ್ರಮದ ಸವಿನೆನಪಿಗೆ ರಾಮಕೃಷ್ಣ ಮಿಷನ್ ಅಂದು ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಸ್ವಾಮಿ ವಿವೇಕಾನಂದ ಮಾರ್ಗ (ರಿಸಾಲ್ದಾರಗಲ್ಲಿ) ದ ರಾಮಕೃಷ್ಣ ಮಿಷನ್ ಆಶ್ರಮದ ಉಪ ಕೇಂದ್ರವಾಗಿರುವ ಸ್ವಾಮಿ ವಿವೇಕಾನಂದ ಮೆಮೋರಿಯಲ್ ನಲ್ಲಿ ಅ.16 ರಂದು ವಿಶೇಷ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ 1 ರಿಂದ 3 ಗಂಟೆವರೆಗೆ ಮಹಾಪ್ರಸಾದ ಏರ್ಪಡಿಸಲಾಗಿದೆ. ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಸಂಜೆ 5:30 ರಿಂದ 7:30 ರ ವರೆಗೆ ಕನ್ನಡ ಮತ್ತು ಮರಾಠಿಯಲ್ಲಿ ಭಜನೆ, ಪ್ರವಚನ, ಸಂಜೆ 7 ರಿಂದ 8:30 ರವರೆಗೆ’ ಮರ್ಯಾದಾ ಪುರುಷೋತ್ತಮ ಶ್ರೀರಾಮ’ ಎಂಬ(ಶ್ರೀ ರಾಮನ ಜನ್ಮದಿಂದ ರಾಜ್ಯಾಭಿಷೇಕದವರೆಗೆ ಏಕಪಾತ್ರಾಭಿನಯ ಹಿಂದಿಯಲ್ಲಿ ನಡೆಯಲಿದೆ.
ಯೋಧ ಸನ್ಯಾಸಿ ಸ್ವಾಮಿ ವಿವೇಕಾನಂದ ಖ್ಯಾತಿಯ ಲೇಖಕ, ನಿರ್ದೇಶಕ, ಅಭಿನೇತ್ರ, ರಾಷ್ಟ್ರೀಯ ಕಲಾಕಾರ ದಾಮೋದರ ರಾಮದಾಸಿ ಅವರಿಂದ ಈ ಕಾರ್ಯಕ್ರಮ ನಡೆಯಲಿದೆ. ನಂತರ ಪ್ರಸಾದ ವಿತರಣೆ ನಡೆಯಲಿದೆ ಎಂದು ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಪ್ರಾಣಾನಂದ ತಿಳಿಸಿದ್ದಾರೆ.
1992 ರ ಅಕ್ಟೋಬರ್ 16 ರ
ಒಂದು ದಿನ ಬೆಳಗಿನ ಜಾವ 6 ರ ಸುಮಾರಿಗೆ ನಗರದ ಹೃದಯ ಭಾಗದಲ್ಲಿರುವ ಪ್ರಸಿದ್ಧ ವಕೀಲರಾದ ಸದಾಶಿವ ಬಾಲಕೃಷ್ಣ ಭಾಟೆಯವರ ಮನೆಯ ಬಾಗಿಲನ್ನು ಯಾರೋ ಬಡಿದಂತಾಯಿತು. ಹೊರಗೆ ಬಂದು ನೋಡಿದರೆ ಕಣ್ಮನ ಸೆಳೆಯುವ ವ್ಯಕ್ತಿತ್ವ. ಬೆಳಗಾವಿ ಬೆಳಗಲು ಬಂದ ಬೆಳಕು. ಅವರೇ ಸ್ವಾಮಿ ವಿವೇಕಾನಂದರು.
ಅಂದು 16ನೇ ಅಕ್ಟೋಬರ್ 1892. ಅದೊಂದು ಪವಿತ್ರವಾದ ಅವಿಸ್ಮರಣೀಯ ದಿನ. ಭಾಟೆಯವರ ಮನೆಯಲ್ಲಿ ಸ್ವಾಮೀಜಿಯವರು 3 ದಿನಗಳ ಕಾಲ ತಂಗಿದ್ದರು. ಇಂದು ಈ ಮನೆಯು ‘ಸ್ವಾಮಿ ವಿವೇಕಾನಂದ ಸ್ಮಾರಕ’ ಎಂಬ ಹೆಸರಿನಿಂದ ಒಂದು ಐತಿಹಾಸಿಕ ಸ್ಥಳವಾಗಿ ನಿರ್ಮಾಣಗೊಂಡಿದೆ.
ಇಲ್ಲಿ ಅಂದು ಸ್ವಾಮಿ ವಿವೇಕಾನಂದರು ಉಪಯೋಗಿಸಿದ ಮಂಚ, ಕೋಲು ಮತ್ತು ಕನ್ನಡಿಯನ್ನು ಸಂರಕ್ಷಿಸಿ ಇರಿಸಲಾಗಿದೆ. ಸ್ವಾಮಿ ವಿವೇಕಾನಂದರ ಕುರಿತಾದ ಚಿತ್ರಕಲಾ ಪ್ರದರ್ಶನವನ್ನು ಸಜ್ಜುಗೊಳಿಸಲಾಗಿದೆ.
ಸ್ಮರಣೀಯ ದಿನವಾದ ಅ.16 ರಂದು ರಿಸಾಲ್ದಾರ್ ಗಲ್ಲಿಯಲ್ಲಿರುವ ‘ಸ್ವಾಮಿ ವಿವೇಕಾನಂದ ಸ್ಮಾರಕ’ ಕ್ಕೆ ಭೇಟಿ ನೀಡಿ ಸ್ವಾಮಿ ವಿವೇಕಾನಂದರಿಗೆ ಪ್ರಣಾಮಗಳನ್ನು ಸಲ್ಲಿಸಲು ಸಾರ್ವಜನಿಕರನ್ನು ಅಹ್ವಾನಿಸುತ್ತಿದ್ದೇವೆ ಅವರು ತಿಳಿಸಿದ್ದಾರೆ.