ಬೆಳಗಾವಿ – ಸೋಮನಟ್ಟಿ, ಭೀಮಗಡ, ಕರಿಕಟ್ಟಿ ಹಾಗೂ ಸಿದ್ದನಹಳ್ಳಿ ಗ್ರಾಮಗಳಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅರಿಸಿಣ – ಕುಂಕುಮ ಕಾರ್ಯಕ್ರಮಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಚಾಲನೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಸೋಮನಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಕೊಠಡಿಯ ನಿರ್ಮಾಣದ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಸಹ ನೆರವೇರಿಸಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಗ್ರಾಮದ ಮಹಿಳೆಯರು, ಕೊಳ್ಳೆಪ್ಪ ನಂದ್ಯಾಗೋಳ, ಮಂಜುನಾಥ್ ಪೂಜೇರಿ, ಟೋಪಣ್ಣ ಪೂಜೇರಿ, ಶೇಖರ್ ಹೊಸೂರಿ, ರಾಮೇಶಿ ನಿಟ್ಟೂರ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.