ಬೆಳಗಾವಿ:
ಕೇಂದ್ರದ ನಿರ್ದೇಶನ ಮತ್ತು ಪರಸ್ಪರ ರಾಜ್ಯಗಳ ಒಪ್ಪಿತ ಸ್ಥಿತಿಸ್ಥಾಪಕತ್ವ( Neutrality)ದ ಮೇರೆಗೂ ಬೆಳಗಾವಿಯಲ್ಲಿ ಎಂಇಎಸ್ ಡಿ. 19ಕ್ಕೆ ರ್ಯಾಲಿ ಆಯೋಜಿಸಿದ್ದು, ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ಅಧಿಕೃತವಾಗಿಯೇ ಬೆಳಗಾವಿ ಪ್ರವೇಶಕ್ಕೆ ಸನ್ನಾಹ ನಡೆಸಿದ್ದಾರೆ.
ನಗರದ ಎರಡನೇ ರೈಲ್ವೇ ಗೇಟ್ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಮಧ್ಯವರ್ತಿ ಎಂಇಎಸ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುತ್ತಿರುವ ಕಾರಣ ಯೋಗ್ಯ ಶಿಷ್ಟಾಚಾರ ಒದಗಿಸುವಂತೆ ಬೆಳಗಾವಿ ಜಿಲ್ಲಾಡಳಿತಕ್ಕೆ ಸಂಸದ ಮಾನೆ ಲಿಖಿತವಾಗಿ ಕೋರಿಕೊಂಡಿದ್ದಾರೆ.
ತಮ್ಮದು B+ ರಕ್ತದ ಗುಂಪು ಇದ್ದು, ‘Y’ ಕೆಟಗೆರಿ ಭದ್ರತೆ ವ್ಯಕ್ತಿಗಳ ಸಾಲಿಗೆ ಸೇರಿದ್ದೇನೆ ಎಂಬುವುದನ್ನು ಸಂಸದ ಮಾನೆ ಅವರು ನಗರ ಪೊಲೀಸ್ ಆಯುಕ್ತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಚಳಿಗಾಲದ ಅಧಿವೇಶನದ ದಿನ MES ರಾಜ್ಯ ಸರಕಾರದೊಂದಿಗೆ ಕಾಲು ಕೆದರಿ ಮಹಾಮೇಳಾವಾ ಆಯೋಜಿಸುತ್ತ ಬಂದಿದೆ. ಕೇಂದ್ರದ ಬುದ್ಧಿ ಮಾತಿಗೂ ಬೆಲೆ ಕೊಡಸ ಸಂದೇಹಾಸ್ಪದ ನಡೆ ಮಹಾರಾಷ್ಟ್ರದ್ದು.
ವಾರದ ಹಿಂದಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ನೇತೃತ್ವದಲ್ಲಿ ಎರಡೂ ರಾಜ್ಯಗಳ ಗಡಿತಂಟೆ ಶಮನ ಮಾಡುವ ಯತ್ನ ನಡೆದಿತ್ತು. ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ಎರಡೂ ರಾಜ್ಯಗಳು ತಟಸ್ಥ ಶಾಂತತೆ ಕಾಪಾಡಿಕೊಳ್ಳಲು ಕೇಂದ್ರ ಸರಕಾರ ನಿರ್ದೇಶನ ನೀಡಿತ್ತು.
ಆದರೆ ಕೊಟ್ಟ ಬಂದ ಮಾತು ಉಳಿಸಿಕೊಳ್ಳಲಾಗದೇ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮಜುಗುರವಾಗುವ ರೀತಿಯಲ್ಲಿ ಬೆಳಗಾವಿಯಲ್ಲಿ MES ಚಟುವಟಿಕೆ ನಡೆಸಿದೆ.
ಕರ್ನಾಟಕ- ಮಹಾರಾಷ್ಟ್ರ ಗಡಿಹೋರಾಟ ವಿಷಯಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಸರಕಾರ ನೇಮಿಸಿರುವ ನ್ಯಾಯಸಮಿತಿಯ ಅಧ್ಯಕ್ಷ ನಾನು ಎಂಬುವುದನ್ನು ಮಾನೆ ಪರಿಚಯಿಸಿಕೊಂಡಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ಬರೋವರೆಗೂ ಕಾಯುವಂತೆ ನಮ್ಮಿಬ್ಬರಿಗೂ ಕೇಂದ್ರ ಸರಕಾರವೇ ಹೇಳಿ ಕಳುಹಿಸಿರುವಾಗ ಮತ್ತೇಕೆ ಸಂದೇಹ ಪಡ್ತೀರಿ…
B+, ‘Y’ are you worried Mr. Mane ಎಂದು ಬೆಳಗಾವಿ ಜನ ಬುದ್ಧಿ ಅವರಿಗೆ ಹೇಳಿದ್ದಾರೆ..!
ಈ ಬೆಳವಣಿಗೆಗಳ ಮಧ್ಯೆ ಬೆಳಗಾವಿ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಏನು ನಿರ್ಧಾರ ತಳೆಯುತ್ತೋ ಕಾಯ್ದು ನೋಡಬೇಕಿದೆ.