ಬೆಂಗಳೂರು: ಚಿತ್ರ ಪ್ರೇಮಿಗಳು ಸಿನಿಮಾ ವೀಕ್ಷಿಸಿದ ಬಳಿಕ ಟಿಕೆಟ್ ಎಸೆಯಬೇಡಿ ಎಂದು ಕರ್ನಾಟಕ ಸರಕಾರ ಸೂಚನೆ ನೀಡಿದೆ.
ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆ ಹೊರಡಿಸಿದ್ದು ”ಸಿನಿಮಾ ಪ್ರಿಯರೇ,
ಚಿತ್ರ ವೀಕ್ಷಣೆ ಬಳಿಕ ಟಿಕೆಟ್ ಎಸೆಯದೆ ಭದ್ರವಾಗಿರಿಸಿಕೊಳ್ಳಿ. ಟಿಕೆಟ್ ಮೇಲಿನ ಗರಿಷ್ಠ 200 ರೂ. ದರ ಮಿತಿಗೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ನಲ್ಲಿ ಸರ್ಕಾರದ ನಿರ್ಣಯದ ಪರವಾಗಿ ತೀರ್ಪು ಬಂದರೆ ಹೆಚ್ಚುವರಿಯಾಗಿ ಪಾವತಿಸಿದ ಹಣ ವಾಪಸ್ ಸಿಗಲಿದೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರಿಗೆ ಟಿಕೆಟ್ ಮಾರಾಟದ ದಾಖಲೆ ನಿರ್ವಹಣೆಗೆ ಸೂಚಿಸಲಾಗಿದೆ” ಎಂದು ಹೇಳಿದೆ.