ಬೆಳಗಾವಿ – ಜಿಲ್ಲೆಯಲ್ಲೇ ಮೊದಲ ಸಾಕ್ಷರ ಭಾರತ ಕಲಿಕಾ ಕೇಂದ್ರ ಶುಕ್ರವಾರ ಬೆಳಗಾವಿಯ ರಾಣಿ ಚನ್ನಮ್ಮ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಯಾಯಿತು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಿಜ್ವಾನ್ ನಾವ್ಗೇಕರ್ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಕ್ಷರ ಭಾರತ ಕಲಿಕಾ ಕೇಂದ್ರ ಅನಕ್ಷರಸ್ಥರಿಗೆ ಓದು ಬರಹ ಕಲಿಸುವ ಉದ್ದೇಶದಿಂದ ಸರಕಾರ ಆರಂಭಿಸಿರುವ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟೂ 50 ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಇದು ಜಿಲ್ಲೆಯ ಪ್ರಪ್ರಥಮ ಸಾಕ್ಷರ ಭಾರತ ಕಲಿಕಾ ಕೇಂದ್ರವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಶಾಲೆಯ ನೂತನ ನಾಮಫಲಕವನ್ನು ಉದ್ಘಾಟಿಸಲಾಯಿತು. ನಿವೃತ್ತ ಪ್ರಾಧ್ಯಾಪಕ ಎಸ್.ಎಸ್.ಹೇಗಡೆ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಾಬು ಸೋಗಲನ್ನವರ್, ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಸೈಬತ್ತಿ, ಸಮೂಹ ಸಂಪನ್ಮೂಲ ವ್ಯಕ್ತಿ ವಂದನಾ ಬರ್ಗೆ, ರವಿ ಶೀಗೆಹಳ್ಳಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಾದೇವ ಗೋಕಾಕ, ಮುಖ್ಯಾಧ್ಯಾಪಕ ಬಿ.ಎಫ್. ನದಾಫ್ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.