ಧಾರವಾಡ: ಕೋಡಿಮಠದ ಸ್ವಾಮೀಜಿಗಳು ರಾಜ್ಯಕ್ಕೆ ಸಂಬಂಧಿಸಿದಂತೆ ಮತ್ತೊಂದು ರಾಜಕೀಯ ಭವಿಷ್ಯ ನುಡಿದಿದ್ದಾರೆ. ಸಂಕ್ರಾಂತಿಯ ವರೆಗೆ ರಾಜ್ಯದಲ್ಲಿ ಸಿದ್ಧರಾಮಯ್ಯ ಸರ್ಕಾರಕ್ಕೆ ಯಾವ ತೊಂದರೆ ಇಲ್ಲ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ದಸರಾ ಕಾರ್ಯಕ್ರಮಕ್ಕೆಂದು ಧಾರವಾಡಕ್ಕೆ ಆಗಮಿಸಿದ್ದಾಗ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸದ್ಯಕ್ಕೆ ಯಾವುದೇ ರಾಜಕೀಯ ಬದಲಾವಣೆಗಳು ಕಂಡುಬರುವುದಿಲ್ಲ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಸಂಕ್ರಾಂತಿವರೆಗೂ ಸಮಸ್ಯೆ ಇಲ್ಲ. ಮುಂದಿನ ರಾಜಕೀಯ ಬದಲಾವಣೆಗಳನ್ನು ಸಂಕ್ರಾಂತಿಯ ನಂತರ ಹೇಳುತ್ತೇನೆ ಎಂದು ಸ್ವಾಮೀಜಿ ಹೇಳಿದರು.
ಮಳೆಯ ಪರಿಸ್ಥಿತಿ ಬಗ್ಗೆ ಮಾತನಾಡಿದ ಸ್ವಾಮೀಜಿ, ” ಮಲೆನಾಡು ಬಯಲು ಸೀಮೆಯಾಗುತ್ತದೆ, ಬಯಲು ನಾಡು ಮಲೆನಾಡಾಗುತ್ತದೆ ಎಂದು ಈ ಹಿಂದೆ ಹೇಳಿದ್ದೆ. ನೋಡಿ ಈಗ ಬಯಲುಸೀಮೆಯಲ್ಲಿ ಭಾರೀ ಮಳೆಯಾಗಿ ಅದು ಮಲೆನಾಡಂತಾಗಿದೆ ” ಎಂದು ತಮ್ಮ ಹಿಂದಿನ ಭವಿಷ್ಯವಾಣಿ ಬಗ್ಗೆ ಉಲ್ಲೇಖಿಸಿದರು.
ದೇಶದಾದ್ಯಂತ ಹಬ್ಬಗಳು ಜನ ಹಿತಕ್ಕಾಗಿ ನಡೆಯುತ್ತವೆ. ದಸರಾ ಹಬ್ಬದ ನಿಜವಾದ ಅರ್ಥ ದುಷ್ಟ ಶಕ್ತಿಗಳನ್ನು ದೂರ ಇಡುವುದು ಎಂದು. ಮನುಷ್ಯ ತನ್ನೊಳಗಿರುವ ಕೋಪ, ತಾಪ, ಆಸೆಗಳನ್ನು ಗೆಲ್ಲಬೇಕು. ಮನುಷ್ಯನಿಗೆ ಆಗ ಸುಖ, ಶಾಂತಿ, ನೆಮ್ಮದಿ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ದಸರಾವನ್ನು ಆಚರಿಸಲಾಗುತ್ತದೆ. ಇದು ನಮ್ಮ ಪರಂಪರೆಯ ದೊಡ್ಡ ಸಂಕೇತ ಎಂದು ತಿಳಿಸಿದರು.
ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
