ಬೆಳಗಾವಿ :
ವಿಧಾನ ಮಂಡಲ ಅಧಿವೇಶನದ
ಆರಂಭದ ದಿನದಂದೇ ಬೆಳಗಾವಿಯಲ್ಲಿ ಎಂಇಎಸ್ ಪ್ರತಿ ವರ್ಷ ಮಹಾಮೇಳಾವವನ್ನು ನಡೆಸುತ್ತಾ ಬಂದಿದೆ.
ಆದರೆ, ಈ ವರ್ಷ ಮಹಾಮೇಳಾವವನ್ನು ನಡೆಸಬೇಕೆ ಬೇಡವೇ ಎಂಬ ತೊಳಲಾಟದಲ್ಲಿ ಸಿಲುಕಿದೆ. ಯಾಕೆಂದರೆ ಮೂರು ದಿನದ ಹಿಂದಷ್ಟೇ ಕೇಂದ್ರ ಗೃಹ ಸಚಿವ ಅಮಿತ ಶಾ ನೀಡಿದ ಕಠಿಣ ಸೂಚನೆ ಇದೀಗ ಎಂಇಎಸ್ ಪಾಲಿಗೆ ಸಂಕಷ್ಟದಲ್ಲಿ ಸಿಲುಕುವಂತೆ ಮಾಡಿದೆ. ಕರ್ನಾಟಕ ಸರಕಾರ ಇದುವರೆಗೆ ಮೇಳಾವಕ್ಕೆ ಅನುಮತಿ ನೀಡಿಲ್ಲ. ಆದರೆ, ಎಂಇಎಸ್ ಮುಖಂಡರು ಅಧಿವೇಶನ ದಿನದಂದೇ ಮೇಳಾವ ನಡೆಸುವುದಾಗಿ ಹೇಳುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಗಡಿಯಲ್ಲಿ ಯಾವುದೇ ಪ್ರಚೋದನಕಾರಿ ಕಾರ್ಯಕ್ರಮ ನಡೆಸದಂತೆ ಸ್ಪಷ್ಟ ಸೂಚನೆ ರವಾನಿಸಿರುವುದು ಈ ಬಾರಿ ಎಂಇಎಸ್ ಗೆ ಗಂಟಲಲ್ಲಿ ಸಿಲುಕಿದ ಕಡುಬಿನಂತಾಗಿದೆ. ಇದರಿಂದ ಈ ಬಾರಿ ಮಹಾಮೇಳಾವದ ತೊಳಲಾಟದಲ್ಲಿ ಎಂಇಎಸ್ ಇರುವುದು ಕಂಡುಬಂದಿದೆ.