ಹುಕ್ಕೇರಿ ಹೀರೋ ಕತ್ತಿಗೆ ಸೆಡ್ಡು ಹೊಡೆದು ಜೀರೋ ಆದ ಜಾರಕಿಹೋಳಿ, ಜೊಲ್ಲೆ ಕುಟುಂಬ ..!
ಕತ್ತಿ ಕರೆಂಟ್ ಮುಟ್ಟಲು ಹೋಗಿ ಶಾಕ್ ಹೊಡಿಸಿಕೊಂಡು ಸತೀಶ, ಅಣ್ಣಾ ಸಾಹೇಬ್ ..!
ಜಲ್ಲಿ- ಜಲ್ಲಿ ದುಡ್ಡು ಸುರಿದರೂ ಒಂದು ಸೀಟ್ ಜಯಗಳಿಸದ ಜೊಲ್ಲೆ, ಜಾರಕಿಹೊಳಿ ಪ್ಯಾನಲ್ ..?
ಬೆಳಗಾವಿ : ಜಿಲ್ಲೆಯಲ್ಲಿ ಕತ್ತಿ ಕುಟುಂಬದ ರಾಜಕಾರಣವನ್ನು ನಿರ್ನಾಮ ಮಾಡಲು ಪಣತೋಟ್ಟು ಕಳೆದೆರಡು ತಿಂಗಳಿನಿಂದ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘಕ್ಕೆ ನಡೆಸುತ್ತಿದ್ದ ಚುನಾವಣೆಯಲ್ಲಿ ಮಾಡಬಾರದ ತಂತ್ರಗಾರಿಕೆ ,ಕುತಂತ್ರಗಳನ್ನು ನಡೆಸಿದರೂ ಕತ್ತಿ ಕುಟುಂಬದ ಜನಪ್ರಿಯತೆ ಮುಂದೆ ರಾಜ್ಯದ ಬಲಿಷ್ಠ ರಾಜಕಾರಣಿ ಕುಟುಂಬವಾಗಿರುವ ಜೊಲ್ಲೆ- ಜಾರಕಿಹೊಳಿ ಸಹೋದರರು ಜೀರೋ ಆಗಿದ್ದಾರೆ.
ಹುಕ್ಕೇರಿಗೆ ಕತ್ತಿ ಕುಟುಂಬವೇ ಹೀರೋ ಎಂದು ಬಲವಾಗಿ ಸಾಬೀತುಪಡಿಸಿ ರಾಜ್ಯಕ್ಕೆ ಹುಕ್ಕೇರಿ ಜನ ಸ್ಪಷ್ಟವಾಗಿ ಸಂದೇಶ ನೀಡಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ಈ ಚುನಾವಣೆಯಲ್ಲಿ ಸುಮಾರು 20 ಕೋಟಿ ರೂ ಹೆಚ್ಚು ದುಡ್ಡು ಸುರಿದರೂ ಒಂದೇ ಒಂದು ಸೀಟು ಗೆಲ್ಲಲಾಗದೇ ಗೋಕಾಕ ಸಾವುಕಾರರ ದಂಡು ಕತ್ತಿ ಸಾವುಕಾರರ ಮುಂದೆ ಮಂಡಿವೂರಿದ್ದಾರೆ.
ಹುಕ್ಕೇರಿ ವಿದ್ಯುತ್ ಸಂಘಕ್ಕೆ ನಿನ್ನೆ ನಡೆದ ಚುನಾವಣೆಯಲ್ಲಿ ರಮೇಶ ಕತ್ತಿ ಬಣ ಎಲ್ಲಾ 15 ಸ್ಥಾನಗಳನ್ನೂ ಗೆದ್ದುಕೊಂಡಿದೆ.
ಜಾರಕಿಹೊಳಿ ಸಹೋದರರಿಗೆ ತೀವ್ರ ಮುಖಭಂಗವಾಗಿದ್ದು, ರಮೇಶ ಕತ್ತಿ ಮತ್ತು ಎ.ಬಿ.ಪಾಟೀಲ ಜೋಡಿ ಭರ್ಜರಿ ಏಟು ನೀಡಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಮಾಜಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಹಾಗೂ ಜಾರಕಿಹೊಳಿಯವರ ಮೂವರು ಸಹೋದರರು ಬೆಂಬಲ ನೀಡಿದ್ದರು.
ಆದರೆ ಅವರ ಪ್ಯಾನೆಲ್ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ.