ಬೆಳಗಾವಿ: ಹುಕ್ಕೇರಿ ತಾಲೂಕು ಕಣಗಲಾ ಸಮೀಪದ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಸಾತಾರಾ ಮೂಲದ ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ.
ಕಂಟೇನರ್ ಲಾರಿ ಹೋಗುತ್ತಿದ್ದಾಗ ಅದು ಇನ್ನೊಂದು ಕಡೆಯ ರಸ್ತೆಯಲ್ಲಿ ಹೋಗುತ್ತಿದ್ದ ಇನೋವಾ ಕಾರಿನ ಮೇಲೆ ಮಗುಚಿದ ಪರಿಣಾಮ ಇನೋವಾ ಕಾರಿನಲ್ಲಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ.
ಲಾರಿ ನಿಪ್ಪಾಣಿಯಿಂದ ಸಂಕೇಶ್ವರ ಕಡೆ ಬರುತ್ತಿತ್ತು. ಬೆಳಗಾವಿಯಿಂದ ನಿಪ್ಪಾಣಿ ಕಡೆಗೆ ಹೋಗುತ್ತಿದ್ದ ಇನೋವಾ ಮೇಲೆ ಲಾರಿ ಬಿದ್ದ ಪರಿಣಾಮ ದುರ್ಘಟನೆ ಸಂಭವಿಸಿದೆ. ಇನೋವಾದಲ್ಲಿದ್ದ ಇನ್ನೂ ನಾಲ್ವರು ಗಾಯಗೊಂಡಿದ್ದಾರೆ.