ಬೆಳಗಾವಿ : ಲಾಡ್ಜ್ ನಲ್ಲಿ ಗಲಾಟೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ ನ್ಯಾಯಾಲಯ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ರೂ. 50,000 ದಂಡ ವಿಧಿಸಿದೆ.
ಶಿವಾಜಿನಗರದ ನವೀನ್ ಶೆಟ್ಟಿ ಮತ್ತು ಹಿಡಕಲ್ ಡ್ಯಾಮ್ ನ ಶಶಿಕುಮಾರ್ ಉದ್ದಪ್ಪಗೋಳ್ ಶಿಕ್ಷೆಗೊಳಗಾದವರು. ಇವರ ಸ್ನೇಹಿತ ವಿನಾಯಕ್ ಕೊಲೆಯಾಗಿದ್ದರು. ಬೆಳಗಾವಿಯ ಲಾಡ್ಜ್ ಒಂದರಲ್ಲಿ ಪಾರ್ಟಿ ಮಾಡಿದ್ದರು. ಆ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿ ಡಿಜೆ ಸೌಂಡ್ ಜೋರಾಗಿ ಹಾಕಿ ಕುಣಿಯುತ್ತಿದ್ದರು. ಶಬ್ದ ಕಡಿಮೆ ಮಾಡು ಎಂಬ ವಿಷಯಕ್ಕೆ ಆರಂಭವಾದ ಜಗಳ ವಿನಾಯಕ ಅವರ ಕೊಲೆಯಲ್ಲಿ ಅಂತ್ಯವಾಗಿತ್ತು.
ಅಧಿಕಾರಿಗಳಾದ ವಿಜಯ ಮುರಗುಂಡಿ ಮತ್ತು ಎಸ್ .ವಿ. ಶಿವಯೋಗಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಬೆಳಗಾವಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎನ್. ಗಂಗಾಧರ ಶಿಕ್ಷೆ ಪ್ರಕಟಿಸಿದ್ದಾರೆ. ಸರಕಾರದ ಪರ ಭಾರತಿ ಹೊಸಮನಿ ಮಂಡಿಸಿದ್ದರು.