ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯಕ್ಕೆ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಅವರು ಭೇಟಿ ನೀಡಿ ಇಲ್ಲಿನ ಕಾರ್ಯ ನಿರ್ವಹಣೆ ಕುರಿತು ಮಾಹಿತಿ ಪಡೆದುಕೊಂಡರು.
ಉಪನಿರ್ದೇಶಕ ರಾಮಯ್ಯ ಅವರೊಂದಿಗೆ ಗ್ರಂಥಾಲಯದ ಎಲ್ಲಾ ವಿಭಾಗಗಳ ವೀಕ್ಷಣೆ ಮಾಡಿ, ಓದುಗರಿಂದ ತುಂಬಿ ತುಳುಕುತ್ತಿದ್ದ ಗ್ರಂಥಾಲಯವನ್ನು ನೋಡಿ ಸಂತಸ ವ್ಯಕ್ತಪಡಿಸಿದರು.
ಇಲ್ಲಿನ ಸಾರ್ವಜನಿಕ ಓದುಗರಿಗೆ ಇರುವ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ,ಓದುಗರೊಂದಿಗೆ ಸಂವಾದ ನಡೆಸಿ,ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಕುರಿತು ಸಲಹೆ, ಸೂಚನೆ ನೀಡಿದರು. ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳ ಸಂಗ್ರಹ ಮತ್ತು ಮಕ್ಕಳ ವಿಭಾಗ ನೋಡಿದರು.
ಈ ಸಂಧರ್ಭದಲ್ಲಿ ಗ್ರಂಥಪಾಲಕರಾದ ಎಸ್ ಎಸ್ ಸೀಮಿಮಠ, ಪ್ರಕಾಶ ಇಚಲಕರಂಜಿ, ಆನಂದ ಮುತ್ತಗಿ, ಸುಮಿತ್ ಕಾವಳೆ, ಸುನಿಲ್ ಕುಮಾರ್, ಸಂಗೀತಾ ನಾವಿ, ಏಕನಾಥ ಅಂಬೇಕರ, ರಾಜು ಕಟ್ಟಿಮನಿ,ಮತ್ತು ಪ್ರಾದೇಶಿಕ ಆಯುಕ್ತರ ಕಚೇರಿ ಸಿಬ್ಬಂದಿ ವರ್ಗದವರು ಹಾಜರಿದ್ದರು.