ಬೆಳಗಾವಿ: ಜಮೀನಿನಲ್ಲಿ ಗಾಂಜಾ ಬೆಳೆದ ವ್ಯಕ್ತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತನ್ನ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದ ವ್ಯಕ್ತಿಯನ್ನು ರಾಯಬಾಗ ಪೊಲೀಸರು ಬಂಧಿಸಿದ್ದಾರೆ. ರಾಯಬಾಗ ತಾಲೂಕು ನಿಡಗುಂದಿ ಗ್ರಾಮದ ಸಿಂಗಾಡಿ ಮಾಳಪ್ಪ ಹಿರೇಕೋಡಿ (45)ತನ್ನ ತಂದೆಗೆ ಸೇರಿದ ಜಮೀನಿನ ಕಬ್ಬಿನ ಬೆಳೆಯ ನಡುವೆ ಅನಧಿಕೃತವಾಗಿದ್ದ ಗಾಂಜಾ ಬೆಳೆದಿದ್ದ. ಸುಮಾರು 25 ಹಸಿ ಗಾಂಜಾ ಗಿಡ, ಹೂವು, ಕಾಂಡ, ಬೇರು ಸಮೇತ ವಶಪಡಿಸಿಕೊಂಡಿದ್ದು ಇವುಗಳು 441 ಕೆಜಿ 830 ಗ್ರಾಂ ಇದ್ದು,22,09,150 ರೂ. ಮೌಲ್ಯದ್ದಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಂಜಾ ಬೆಳೆದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು
