ಬೆಳಗಾವಿ: ಇಲ್ಲಿನ ಶಹಾಪುರದಲ್ಲಿರುವ ರವೀಂದ್ರ ಕೌಶಿಕ್ ನಗರ ಕೇಂದ್ರ ಗ್ರಂಥಾಲಯಕ್ಕೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ. ಕಿರಣ ಸವಣೂರ, ಡಾ. ರಮೇಶ್ ಕುರಿ ಹಾಗೂ ವಿದ್ಯಾರ್ಥಿಗಳು ಶೈಕ್ಷಣಿಕ ಭೇಟಿ ನೀಡಿದರು.
ತರಬೇತಿಯ ಭಾಗವಾಗಿ ಗ್ರಂಥಾಲಯಗಳ ನಿರ್ವಹಣೆ, ಗ್ರಂಥಾಲಯದಲ್ಲಿ ನೀಡುತ್ತಿರುವ ಸೇವೆಗಳು, ಡಿಜಿಟಲ್ ಗ್ರಂಥಾಲಯ ಹಾಗೂ ಚಿಕ್ಕ ಮಕ್ಕಳ ಗ್ರಂಥಾಲಯದ ಬಗ್ಗೆ ಮಾಹಿತಿ ಪಡೆದುಕೊಂಡರು. ಗ್ರಂಥಾಲಯ ನಿರ್ವಹಣೆ ಹಾಗೂ ನೀಡುತ್ತಿರುವ ಸೇವೆಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಗ್ರಂಥಪಾಲಕ ಎನ್. ವೈ. ಪಾಟೀಲ ಅವರು ಗ್ರಂಥಾಲಯ ನಿರ್ವಹಣೆ, ಸೇವೆಗಳು ಹಾಗೂ ಗ್ರಂಥಾಲಯದ ವಿವಿಧ ವಿಭಾಗಗಳ ಬಗ್ಗೆ ಮಾಹಿತಿ ನೀಡಿದರು. ಮನಿಷಾ ಹುಲ್ಲೋಳಿ ಅವರು ಡಿಜಿಟಲ್ ಗ್ರಂಥಾಲಯದ ಬಗ್ಗೆ ವಿವರಣೆ ನೀಡಿದರು. ಅಶ್ವಿನಿ, ಸ್ಮಿತಾ ದೇಸಾಯಿ ಹಾಗೂ ಮಂಜುನಾಥ ಉಪಸ್ಥಿತರಿದ್ದರು.