ಬೆಳಗಾವಿ : ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದಲ್ಲಿ ಬುಧವಾರ ರಾತ್ರಿ ಯುವಕನೊಬ್ಬ ಬಸ್ ನಿಂದ ಇಳಿಯುತ್ತಿದಂತೆ ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಕೊನೆಗೂ ಯಮಕನಮರಡಿ ಪೊಲೀಸರು ಪ್ರಕರಣದ ರಹಸ್ಯವನ್ನು ಭೇದಿಸಲು ಯಶಸ್ವಿಯಾಗಿದ್ದಾರೆ.
ಯುವಕ ಬುಧವಾರ ರಾತ್ರಿ ಬಸ್ ನಿಂದ ಇಳಿದು ಮನೆ ಕಡೆ ಹೊರಟ್ಟಿದ್ದ. ಈ ವೇಳೆ ಏಕಾಎಕಿ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಮಹಾಂತೇಶ ಬುಕಾನಟ್ಟಿ (24) ಕೊಲೆಯಾದ ಯುವಕ. ಯುವಕನನ್ನು ಕೊಲೆ ಮಾಡಿದ ಆರೋಪಿಗಳು ಸ್ಥಳದಲ್ಲೇ ಮಚ್ಚು ಬಿಟ್ಟು ಪರಾರಿಯಾಗಿದ್ದರು. ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು ಈತ ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು ಇದೇ ಕೊಲೆಗೆ ಪ್ರಮುಖ ಕಾರಣ ಎನ್ನಲಾಗಿತ್ತು. ಇದೇ ಎಳೆಯ ಮೇಲೆ ಪೊಲೀಸರು ಪ್ರಕರಣದ ಬೆನ್ನು ಹತ್ತಿ ಹೋಗಿದ್ದಾರೆ. ಕೊನೆಗೂ ಪ್ರಕರಣಕ್ಕೆ ಸಂಬಂಧಪಟ್ಟ ಮಾಹಿತಿ ಒಂದೊಂದೇ ಸತ್ಯ ಹೊರ ಬಿದ್ದಿದೆ.

ಹಣ್ಣಿನ ವ್ಯಾಪಾರದ ಜೊತೆಗೆ ಪಾರ್ಟ್ ಟೈಮ್ ಆಗಿ ಝೇಮೇಟೋದಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜ ಬುಕಾನಟ್ಟಿ (26)ಪ್ರತಿದಿನ ಹುಕ್ಕೇರಿ ತಾಲೂಕು ಶಹಾಬಂದರಗೆ ಹೋಗಿ ಬರುತ್ತಿದ್ದ.
24 ವರ್ಷದ ಮಹಾಂತೇಶ ಬುಕಾನಟ್ಟಿ ಬೆಳಗಾವಿಯ ಖಾಸಗಿ ಕಾಲೇಜಿನಲ್ಲಿ ಹಾಗೂ ಫುಡ್ ಡೆಲಿವರಿ ಬಾಯ್ ಆಗಿಯೂ ಕೆಲಸ ನಿರ್ವಹಿಸುತ್ತಿದ್ದ. ಬಸವರಾಜ ಈತನ ದೂರದ ಸಂಬಂಧಿಯಾಗಿದ್ದ. ಮಹಾಂತೇಶ ಮತ್ತು ಅಕ್ಷತಾ ನಡುವೆ ಅಕ್ರಮ ಸಂಬಂಧ ಇತ್ತು.
ಬಸವರಾಜ ಮತ್ತು ಅಕ್ಷತಾ ದಂಪತಿಗೆ ಹದಿನಾರು ತಿಂಗಳ ಹಿಂದೆ ಒಂದು ಹೆಣ್ಣು ಮಗು ಜನಿಸಿತು. ಮಗುವನ್ನು ತವರಿನಲ್ಲಿ ಬಿಟ್ಟು ಪ್ರಿಯತಮ ಮಹಾಂತೇಶ ಜೊತೆಗೆ ಆಕೆ ಕಾಲ ಕಳೆಯುತ್ತಿದ್ದಳು. ಆದರೆ ಮಗುವನ್ನು ನೋಡಲು ಹೋಗುತ್ತಿರಲಿಲ್ಲ. ಇದರಿಂದ ಮಹಾಂತೇಶನನ್ನು ಬಸವರಾಜ ಕೊಲೆಗೈದಿದ್ದಾನೆ. ಮಗುವನ್ನು ನೋಡಲು ಅಕ್ಷತಾ ಬಂದಿಲ್ಲ ಎಂದು ಆಕೆಯನ್ನು ಸಹ ಕೊಲೆ ಮಾಡಲು ಹೊರಟಾಗ ಯಮಕನಮರಡಿ ಸಿಪಿಐ ಜಾವೇದ ಮುಶಾಪುರಿ ಆರೋಪಿ ಬಸವರಾಜ ನನ್ನು ಬಂಧಿಸಿ, ಅಕ್ಷತಾಳನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾಂತೇಶನ ಕೊಲೆಯ ಬಳಿಕ ಬಸವರಾಜ ತನ್ನ ಹೆಂಡತಿ ಅಕ್ಷತಾಳನ್ನು ಕೊಲೆ ಮಾಡಲು ಮುಂದಾಗಿದ್ದನ್ನು ಅರಿತ ಸಿಪಿಐ ಜಾವೇದ ಮುಶಾಪುರಿ ಅವರು ಕೊನೆಗೂ ಅಕ್ಷತಾಳ ಜೀವವನ್ನು ಉಳಿಸಿದ್ದಾರೆ. ಅವರ ಚಾಣಾಕ್ಷತನದಿಂದ ಅಕ್ಷತಾ ಉಳಿದುಕೊಂಡಿದ್ದಾಳೆ.
ವಿವಾಹಿತೆಯೊಂದಿಗೆ ಅನೈತಿಕ ಸಂಬಂಧದ ಅನುಮಾನ : ಯುವಕನ ಕೊಚ್ಚಿ ಕೊಲೆಗೈದ ಪ್ರಕರಣ ಭೇದಿಸಿದ ಯಮಕನಮರಡಿ ಪೊಲೀಸರು
