ದುಬೈ : ಸಾಂಪ್ರದಾಯಿಕ ಬದ್ದ ಎದುರಾಳಿಗಳಾಗಿರುವ ಭಾರತ-ಪಾಕಿಸ್ತಾನ ನಡುವೆ ಮತ್ತೊಂದು ಟೀ ಟ್ವೆಂಟಿ ಕ್ರಿಕೆಟ್ ಪಂದ್ಯಾವಳಿಗೆ ವೇದಿಕೆ ಸಜ್ಜುಗೊಂಡಿದೆ.
ಸೂಪರ್ ಫೋರ್ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸೆಪ್ಟೆಂಬರ್ 21ರಂದು ಭಾನುವಾರ ಈ ಪಂದ್ಯ ನಡೆಯಲಿದೆ. ಏ ಗುಂಪಿನಿಂದ ಭಾರತ ಮತ್ತು ಪಾಕಿಸ್ತಾನ ತಂಡಗಳು ತೇರ್ಗಡೆಯಾಗಿವೆ.
ಯುಎಇ ಮತ್ತು ಒಮಾನ್ ತಂಡಗಳು ಟೂರ್ನಿಯಿಂದ ಹೊರ ಬಿದ್ದಿವೆ. ಬುಧವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಯುಎಇ ತಂಡವನ್ನು ಸೋಲಿಸಿದೆ.