ಬೆಳಗಾವಿ :ರಾಜ್ಯದಲ್ಲಿ ದಿನಾಂಕ 22-09-2025ರಿಂದ ಮನೆ ಮನೆ ಜಾತಿ ಸಮೀಕ್ಷೆ ನಡೆಯಲಿದ್ದು, ಈ ಸಮೀಕ್ಷೆಯಲ್ಲಿ ಉಪ್ಪಾರ ಸಮಾಜದ ಸುಮಾರು 25-30 ಉಪಜಾತಿಗಳು ಗುರುತಿಸಲ್ಪಟ್ಟಿವೆ.
ಉದಾಹರಣೆಗೆ: ಕೂಲಿ ಉಪ್ಪಾರ, ಎಲೆ ಉಪ್ಪಾರ, ಗಾರೆ ಉಪ್ಪಾರ, ಹಳ್ಳಿ ಉಪ್ಪಾರ, ಕಲ್ಲುಕುಟಿಗ ಉಪ್ಪಾರ, ಲಿಂಗಾಯತ ಉಪ್ಪಾರ, ಲೋನರಿ, ಮೇಲುಗಾರಾ, ಮೇಲು ಸಕ್ಕರೆ ಶೆಟ್ಟಿ, ಮೇಲು ಸಕ್ಕರೆ ಉಪ್ಪಾರ, ನಾಮದ ಉಪಹಾರ, ಸಾಧು ಶೆಟ್ಟಿ, ಸಗರ, ಸುಣ್ಣ ಉಪ್ಪಾರ, ಉಪನಾಡು, ಉಪ್ಪಳಿಗ, ಉಪ್ಪಾರ ಬಲಿಜ, ಉಪ್ಪಾರ/ಉಪ್ಪೇರ, ಉಪ್ಪಾರ ಗೌಂಡಿ, ಉಪ್ಪಾರ ಗೌಡ, ಉಪ್ಪಾರ ಶೆಟ್ಟಿ, ಉಪ್ಪಿನ ಕೊಳಗ ಮುಂತಾದ ಅನೇಕ ಉಪಜಾತಿಗಳು.
ಹೆಚ್ಚು ಹೆಸರುಗಳಿಂದ ಗೊಂದಲ ಉಂಟಾಗದಂತೆ ಸಮಾಜದ ಬಂಧುಗಳು, ಗುರುಹಿರಿಯರು, ಯುವಕರು ಮತ್ತು ಸಂಘಟನೆಗಳ ಪ್ರತಿನಿಧಿಗಳು ಒಗ್ಗೂಡಿ ಸಾಮಾನ್ಯ ಅಭಿಯಾನ ನಡೆಸಬೇಕು ಎಂದು ಜಿಲ್ಲಾ ಮಟ್ಟದ ಜಗೃತಿ ಹಾಗೂ ಉಸ್ತುವಾರಿ ಸಮಿತಿ ನಾಮನಿರ್ದೇಶಿತ ಸದಸ್ಯರು ಉಪ್ಪಾರ ಸಮಾಜದ ಮುಖಂಡ ಬಸವರಾಜ ಆಯಟ್ಟಿ ಮನವಿ ಮಾಡಿದ್ದಾರೆ.
“ಪ್ರತಿ ಮನೆಯವರು ಜಾತಿ ಕಾಲಮ್ನಲ್ಲಿ ಸ್ಪಷ್ಟವಾಗಿ ‘ಉಪ್ಪಾರ’ ಎಂದು ಬರೆಸಿಕೊಳ್ಳಬೇಕು. ಯಾರೂ ಜಾತಿಯಿಂದ ವಂಚಿತರಾಗಬಾರದು. ನಮ್ಮ ಜನಸಂಖ್ಯೆ ನಿಖರವಾಗಿ ದಾಖಲಾದರೆ ಮಾತ್ರ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕ ಸೌಲಭ್ಯಗಳು ದೊರಕುತ್ತವೆ ಮತ್ತು ಮೀಸಲಾತಿ ಹೆಚ್ಚುವರಿ ಲಭ್ಯವಾಗುತ್ತದೆ,” ಎಂದು ಅವರು ತಿಳಿಸಿದ್ದಾರೆ.
ಅದೇ ವೇಳೆ, ಸಮೀಕ್ಷೆಯಲ್ಲಿ ತಪ್ಪು ಮಾಹಿತಿ ನೀಡದಂತೆ ಎಚ್ಚರಿಕೆ ನೀಡಲಾಗಿದೆ. ಜಮೀನು, ಮನೆ ಅಥವಾ ಆಸ್ತಿ ಇಲ್ಲದಿದ್ದರೆ “ಇಲ್ಲ” ಎಂದು, ಶಿಕ್ಷಣ ಓದಿಲ್ಲದಿದ್ದರೆ “ಅನಕ್ಷರಸ್ಥ” ಎಂದು, ಉದ್ಯೋಗವಿಲ್ಲದಿದ್ದರೆ ಅದನ್ನೂ ಸ್ಪಷ್ಟವಾಗಿ ದಾಖಲಿಸುವಂತೆ ಮನವಿ ಮಾಡಲಾಗಿದೆ.
“ನಿಖರ ಮಾಹಿತಿ ನೀಡಿದರೆ ಮಾತ್ರ ಸಮಾಜಕ್ಕೆ ಸರಿಯಾದ ಸೌಲಭ್ಯಗಳು ಮುಂದುವರಿಯುತ್ತವೆ ಮತ್ತು ಮೀಸಲಾತಿ ಉಳಿಯುತ್ತದೆ” ಎಂದು ಬಸವರಾಜ ಆಯಟ್ಟಿ ಒತ್ತಿಹೇಳಿದ್ದಾರೆ.