ಬೆಳಗಾವಿ: ಸಾಂಬ್ರಾದ ಭಾರತಿಯ ವಾಯುದಳದ, ಏರ್ ಮನ್ ಟ್ರೈನಿಂಗ್ ಸ್ಕೂಲಿನ ಅಧಿಕಾರಿಗಳು, ಜೇ ಡಬ್ಲ್ಯೂ ಓ- ಎಸ್ ಅಭಿಷೇಕ್ ಬಚ್ಚನ್, ಟಿ ಎನ್ ಸಾಧು ಮತ್ತು ಸಾರ್ಜೆಂಟ್ ಅಮಿತ್ ಕುಮಾರ ಸೇರಿದಂತೆ, 40 ಪ್ರಶಿಕ್ಷಣಾರ್ಥಿಗಳನ್ನು ಒಳಗೊಂಡ ತಂಡ, ನಗರದ ಕೇಂದ್ರ ಗ್ರಂಥಾಲಯ ಹಾಗೂ ಶಹಾಪುರ ಇ.ಗ್ರಂಥಾಲಯಕ್ಕೆ ಶೈಕ್ಷಣಿಕ ಭೇಟಿ ನೀಡಿದರು.
ಅವರ ತರಬೇತಿಯ ಭಾಗವಾಗಿ ಗ್ರಂಥಾಲಯ ನಿರ್ವಹಣೆ ಮತ್ತು ಸೇವೆಗಳು ಮತ್ತು ಕಾರ್ಯ ನಿರ್ವಹನೆ ಕುರಿತು ವಿಷಯಗಳು ಇರುತ್ತವೆ. ಅದರಲ್ಲೂ ಸಾರ್ವಜನಿಕ ಗ್ರಂಥಾಲಯಗಳ ಬಗ್ಗೆ ಅಭ್ಯಾಸವಿರುತ್ತದೆ.
ಬೆಳಗಾವಿ ಕೇಂದೃ ಗ್ರಂಥಾಲಯದ ಉಪನಿರ್ದೇಶಕ ರಾಮಯ್ಯ ಮಾತನಾಡಿ, ಗ್ರಂಥಾಲಯ ಕಾಯಿದೆ, ಬಜೆಟ್,ಆಡಳಿತಾತ್ಮಕ ವಿಷಯಗಳು,ಪುಸ್ತಕ ಖರೀದಿ ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಿದರು.ಜೊತೆಗೆ ಅವರ ರಾಷ್ಟ್ರಸೇವೆಗೆ ಇಲಾಖೆಯ ಪರವಾಗಿ ಧನ್ಯವಾದ ಅರ್ಪಿಸಿದರು.
ಗ್ರಂಥಪಾಲಕ ಎಸ್ .ಎಸ್ .ಸೀಮಿಮಠ ಮತ್ತು ಪ್ರಕಾಶ ಇಚಲಕರಂಜಿ ಅವರು ತಾಂತ್ರಿಕ ವಿಭಾಗದ ಕಾರ್ಯ,ಗ್ರಂಥಾಲಯದ ವಿವಿಧ ವಿಭಾಗಗಳ ಕಾರ್ಯನಿರ್ವಹಣೆ, ಪುಸ್ತಕ ಸಂಗ್ರಹ, ನೊಂದಣಿ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ ವಿಭಾಗ, ಅಂತರ್ಜಾಲ ವಿಭಾಗ, ನಿಯತಕಾಲಿಕೆಗಳು, ದಿನಪತ್ರಿಕೆ,ಮಕ್ಕಳ ವಿಭಾಗದ ಸಂಗ್ರಹದ ಬಗ್ಗೆ ಮಾಹಿತಿಯನ್ನು ಅಂಬೇಕರ, ಸುನೀಲ್, ಸರಸ್ವತಿ, ಲಕ್ಷ್ಮಿ, ವಿಜಯಲಕ್ಷ್ಮೀ, ರಾಜೇಶ್ವರಿ ಮತ್ತು ಪೂರ್ಣಿಮಾ ಅವರು ನೀಡಿದರು.
ಗ್ರಂಥಾಲಯ ನಿರ್ವಹಣೆ ಮತ್ತು ಸೇವೆಗಳ ಬಗ್ಗೆ ಪ್ರಶಿಕ್ಷಣಾರ್ಥಿಗಳು ಖುಷಿ ವ್ಯಕ್ತಪಡಿಸಿ, ಅವಶ್ಯಕ ಮಾಹಿತಿಯನ್ನು ಕೇಳಿ ತಿಳಿದುಕೊಂಡರು. ಪ್ರತಿ ವರ್ಷ ಈ ಟ್ರೈನಿಂಗ್ ಸ್ಕೂಲ್ ಪ್ರಶಿಕ್ಷಣಾರ್ಥಿಗಳು ಗ್ರಂಥಾಲಯಕ್ಕೆ ಶೈಕ್ಷಣಿಕ ಭೇಟಿ ನೀಡುವ ಮೂಲಕ ತಮ್ಮ ಜ್ಞಾನಭಿವೃದ್ದಿ ಮಾಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಸುಮಿತ್ ಕಾವಳೆ, ಅನಂದ ಮುತ್ತಗಿ, ಸಂಗೀತಾ, ದ್ರಾಕ್ಷಾಯಿಣಿ, ಲತಾ ಎಂ, ಐಹೊಳೆ ಮತ್ತಿತರು ಉಪಸ್ಥಿತರಿದ್ದರು.