ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಸಲ್ಲಿಕೆಯಾದ ಅರ್ಜಿ ಮತ್ತು ಹೆಚ್ಚುವರಿ ಹಾಸಿಗೆ ದಿಂಬು ನೀಡುವ ಕುರಿತ ಆದೇಶವನ್ನು ಕೋರ್ಟ್ ಕಾಯ್ದಿರಿಸಿದೆ.
ಮಂಗಳವಾರ ಬೆಂಗಳೂರಿನ 57 ಸಿಸಿಹೆಚ್ ಕೋರ್ಟ್ನಲ್ಲಿ ವಿಚಾರಣೆ ನಡೆದಿದೆ. ಆಗ ದರ್ಶನ್ ಅವರು ನ್ಯಾಯಾಧೀಶರ ಮುಂದೆ ಕೈ ಎತ್ತಿ ಮನವಿವೊಂದನ್ನು ಮಾಡಿದ್ದಾರೆ.
ಜೈಲಿನ ಶಿಕ್ಷೆಯನ್ನು ಅನುಭವಿಸಲು ಆಗುತ್ತಿಲ್ಲ. ನನಗೆ ಸ್ವಲ್ಪ ವಿಷ ಕೊಡಿಸಿ ಎಂದು ದರ್ಶನ್ ಜಡ್ಜ್ ಮುಂದೆ ಕಣ್ಣೀರಿಟ್ಟಿದ್ದಾರೆ. ಕೋರ್ಟ್ನಿಂದಲೇ ವಿಷ ನೀಡಲು ಆದೇಶಿಸಿ ಎಂದು ಆರೋಪಿ ದರ್ಶನ್ ಕಣ್ಣೀರಿಟ್ಟಿದ್ದಾರೆ.
ನಾನು ಬಿಸಿಲು ನೋಡಿ ತುಂಬಾ ದಿನಗಳು ಕಳೆದಿದೆ. ನನ್ನ ಕೈ ಎಲ್ಲಾ ಫಂಗಸ್ ಬಂದಿದೆ. ಬೇರೆ ಯಾರಿಗೂ ಬೇಡ ನನಗೆ ಸ್ವಲ್ಪ ವಿಷ ಕೊಡಿ ಎಂದು ದರ್ಶನ್ ಹೇಳಿದ್ದಾರೆ.
ಇದಕ್ಕೆ ಜಡ್ಜ್ ನೀವು ಹಾಗೆಲ್ಲ ಕೇಳುವಂತಿಲ್ಲ. ಜೈಲು ಅಧಿಕಾರಿಗಳಿಗೆ ಯಾವ ಆದೇಶ ನೀಡಬೇಕೋ ಅದನ್ನು ನೀಡುತ್ತೇವೆ ಎಂದು ಜಡ್ಜ್ ಹೇಳಿದ್ದಾರೆ.
ಇತ್ತೀಚೆಗೆ ಸುಪ್ರೀಂ ತೀರ್ಪಿನ ಬಳಿಕ ದರ್ಶನ್ ಹಾಗೂ ಇತರೆ ಆರೋಪಿಗಳನ್ನು ಬಳ್ಳಾರಿ ಜೈಲಿಗೆ ಜೈಲಿಗೆ ಹಾಕುವುದರ ಕುರಿತು ಪರಪ್ಪ ನ ಅಗ್ರಹಾರ ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದರ ಜತೆಗೆ ಕೆಲವೊಂದು ಸವಲತ್ತುಗಳನ್ನು ಜೈಲಿನಲ್ಲಿ ದರ್ಶನ್ ಅವರಿಗೆ ನೀಡಬೇಕೆಂದು ಅರ್ಜಿ ಸಲ್ಲಿಕೆಯಾಗಿತ್ತು. ಎರಡು ದಿಂಬು, ಎರಡು ಬೆಡ್ ಶೀಟ್, ದಟ್ಟ ಹಾಗೂ ಹೆಚ್ಚುವರಿ ಬಟ್ಟೆಗೆ ಅರ್ಜಿ ಸಲ್ಲಿಸಿದ್ದರು.