ಬೆಳಗಾವಿ: ಗಣೇಶ ವಿಸರ್ಜನೆ ಮುಗಿಸಿ ವಾಪಸ್ ಮನೆಗೆ ಬರುವಾಗ ಅದೇ ಟ್ಯಾಕ್ಟರ್ ಗಾಲಿಗೆ ಸಿಲುಕಿ ಬಾಲಕ ಮೃತಪಟ್ಟ ಘಟನೆ ಸೋಮವಾರ ರಾತ್ರಿ ತಾಲೂಕಿನ ಗುಡಸ ಗ್ರಾಮದ ಬಸ್ ನಿಲ್ದಾಣ ಬಳಿ ನಡೆದಿದೆ.
ಮೃತ ಬಾಲಕ ಪ್ರಜ್ವಲ್ ಅಮ್ಮಣಗಿ (11). ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತರಾದ ಭಿಮಗೌಡ ಬಸಗೌಡ ಅಮ್ಮಣಗಿ ಸುಪುತ್ರ. ಮೃತರ ಬಾಲಕನ ಅಂತ್ಯಕ್ರಿಯೆ ಗುಡಸ ಗ್ರಾಮದ ಕೋಟವಾಗಿ ತೋಟದ ಜಮೀನಿನಲ್ಲಿ ನೆರವೇರಿಸಲಾಯಿತು. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರಾಕ್ಟರ್ ಗಾಲಿಗೆ ಸಿಲುಕಿ ಬಾಲಕ ಸಾವು
