ದೆಹಲಿ :ಮೂರು ಪ್ರಮುಖ ವಿಧಾನಸಭಾ ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿದ ನಂತರ, ಈಗ ಲೋಕಸಭಾ ಚುನಾವಣೆ ನಡೆದರೆ ಎನ್ಡಿಎ ಪ್ರಬಲ ಪ್ರದರ್ಶನ ನೀಡಲಿದೆ ಮತ್ತು 324 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಕಂಡುಬಂದಿದೆ. ಮತ್ತೊಂದೆಡೆ, 2024 ರಲ್ಲಿ 234 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಇಂಡಿಯಾ ಮೈತ್ರಿಕೂಟವು ಎನ್ಡಿಎಗೆ ಸ್ವಲ್ಪಮಟ್ಟಿನ ಆಘಾತ ನೀಡಿದರೂ ಈಗ ಚುನಾವಣೆ ನಡೆದರೆ ಇಂಡಿಯಾ ಮೈತ್ರಿಕೂಟಕ್ಕೆ ಆಘಾತವಾಗಲಿದೆ ಎಂದು ಸಮೀಕ್ಷೆಯಲ್ಲಿ ಕಂಡುಬಂದ ಅಂಶವಾಗಿದೆ. ಈಗ ಚುನಾವಣೆ ನಡೆದರೆ ಇಂಡಿಯಾ ಮೈತ್ರಿಕೂಟದ ಸಂಖ್ಯೆಯು 208 ಕ್ಕೆ ಇಳಿಯುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ.
ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ (MOTN) ಸಮೀಕ್ಷೆಯನ್ನು ಜುಲೈ 1 ಮತ್ತು ಆಗಸ್ಟ್ 14, 2025 ರ ನಡುವೆ ನಡೆಸಲಾಯಿತು, ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ 54,788 ವ್ಯಕ್ತಿಗಳಲ್ಲಿ ಸಮೀಕ್ಷೆಯನ್ನು ನಡೆಸಲಾಯಿತು. ಸಿ ವೋಟರ್ನ ನಿಯಮಿತ ಟ್ರ್ಯಾಕರ್ ಡೇಟಾದಿಂದ ಹೆಚ್ಚುವರಿಯಾಗಿ 1,52,038 ಸಂದರ್ಶನಗಳನ್ನು ಸಹ ವಿಶ್ಲೇಷಿಸಲಾಗಿದೆ. ಹೀಗಾಗಿ, ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ವರದಿಗಾಗಿ ಒಟ್ಟು 2,06,826 ಪ್ರತಿಕ್ರಿಯಿಸಿದವರ ಅಭಿಪ್ರಾಯವನ್ನು ಪರಿಗಣಿಸಲಾಗಿದೆ.
2024 ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ, 543 ಸ್ಥಾನಗಳಲ್ಲಿ ಕೇವಲ 240 ಸ್ಥಾನಗಳನ್ನು ಗೆದ್ದಿತ್ತು. ಇದು ಸರಳ ಬಹುಮತ ಪಡೆದು ಸರ್ಕಾರ ರಚಿಸಲು ಅಗತ್ಯವಿರುವ 272 ಸ್ಥಾನಗಳಿಗೆ 32 ಸ್ಥಾನಗಳು ಕಡಿಮೆಯಾಗಿತ್ತು.
ಆದಾಗ್ಯೂ, ಬಿಜೆಪಿ ಹಾಗೂ ಅದರ ಎನ್ಡಿಎ ಮೈತ್ರಿಕೂಟದ ಅಂಗಪಕ್ಷಗಳು ಸೇರಿ ಒಟ್ಟಾರೆ 293 ಸ್ಥಾನಗಳು ಗೆದ್ದಿದ್ದರಿಂದ ಮೋದಿಗೆ ಸತತ ಮೂರನೇ ಬಾರಿಗೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟವು. ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿಗೆ ಹೋಲಿಕೆಯಾಗುವ ಸಾಧನೆ ಇದಾಗಿದೆ. ಇಂಡಿಯಾ ಮೈತ್ರಿಕೂಟವು 234 ಸ್ಥಾನಗಳನ್ನು ಗಳಿಸುವ ಮೂಲಕ ಎನ್ಡಿಎಯ ಅದ್ಭುತ ಗೆಲುವಿಗೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಯಿತು.
ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆಗಿಂತ ಉತ್ತಮ ಪ್ರದರ್ಶನ ನೀಡಿದ್ದ ವಿಪಕ್ಷಗಳ ಬಣದ ಚುನಾವಣಾ ಅದೃಷ್ಟವು ಕುಸಿಯಿತು. ನಂತರ ನಡೆದ ಹರಿಯಾಣ, ಮಹಾರಾಷ್ಟ್ರ ಮತ್ತು ದೆಹಲಿಯಂತಹ ಪ್ರಮುಖ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿ ವಿಪಕ್ಷಗಳ ಮೈತ್ರಿಕೂಟವು ಸೋಲನ್ನು ಅನುಭವಿಸಿತು.
ಈಗ ನಡೆಸಿದ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿಯೂ ಇದರ ಪ್ರತಿಫಲನ ಕಂಡುಬಂದಿದೆ. ಪಕ್ಷವಾರು ನೋಡಿದರೆ, ಈಗ ಸಾರ್ವತ್ರಿಕ ಚುನಾವಣೆ ನಡೆದರೆ, ಬಿಜೆಪಿಯೊಂದೇ 260 ಸ್ಥಾನಗಳನ್ನು ಪಡೆಯುತ್ತದೆ ಆದರೂ ಪಕ್ಷ ಏಕಾಂಗಿಯಾಗಿ ಸರಳ ಬಹುಮತ ಪಡೆಯಲು ವಿಫಲವಾಗಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಸಮೀಕ್ಷೆಯು ಫೆಬ್ರವರಿ ಆವೃತ್ತಿಯಲ್ಲಿ ನಡೆಸಿದ ವೇಳೆ ಕಂಡುಬಂದಿದ್ದ 281 ಸ್ಥಾನಗಳಿಗಿಂತ ಇದು ಕುಸಿತವಾಗಿದೆ.
ಎನ್ಡಿಎ 343 ಸ್ಥಾನಗಳಿಂದ 324 ಕ್ಕೆ ಕುಸಿಯಲಿದೆ ಎಂಬುದು ಫೆಬ್ರವರಿಯಲ್ಲಿ ನಡೆದ ಸಮೀಕ್ಷೆಯಲ್ಲಿ ಕಂಡುಬಂದಿತ್ತು.
ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಈಗ ಲೋಕಸಭೆಗೆ ಚುನಾವಣೆ ನಡೆದರೆ ಕಾಂಗ್ರೆಸ್ 97 ಸ್ಥಾನಗಳನ್ನು ಗೆಲ್ಲಬಹುದು ಊಹಿಸಿದೆ – 2024 ರ ಚುನಾವಣೆಯಲ್ಲಿ ಅದು ಗೆದ್ದ 99 ಸ್ಥಾನಗಳಿಗೆ ಹೋಲಿಸಿದರೆ ಇದು ಎರಡು ಸ್ಥಾನ ಕುಸಿತವಾಗಿದೆ. ಆದರೆ ಫೆಬ್ರವರಿಯಲ್ಲಿ ನಡೆದ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಕಂಡುಬಂದಿದ್ದ 78 ಸ್ಥಾನಗಳ ಪ್ರಕ್ಷೇಪಣಕ್ಕೆ ಹೋಲಿಸಿದರೆ, ಸ್ವಲ್ಪಹೆಚ್ಚಾಗಿದೆ.
ಈಗ ಚುನಾವಣೆಗಳು ನಡೆದರೆ ಎನ್ಡಿಎ ತನ್ನ ಮತ ಪಾಲನ್ನು 46.7% ಕ್ಕೆ ಹೆಚ್ಚಿಸಿಕೊಳ್ಳಲಿದೆ. 2024 ರ ಲೋಕಸಭೆ ಚುನಾವಣೆಯಲ್ಲಿ ಅದು ಶೇ. 44 ರಷ್ಟು ಮತಗಳನ್ನು ಪಡೆದಿತ್ತು. ಇಂಡಿಯಾ ಮೈತ್ರಿಕೂಟವು, ಸಮೀಕ್ಷೆಯು ಶೇ. 40.9 ರಷ್ಟು ಮತಗಳನ್ನು ಪಡೆಯಲಿದೆ ಎಂದು ಊಹಿಸಲಿದೆ.
ಮೂಡ್ ಆಫ್ ದಿ ನೇಷನ್ ಸರ್ವೆ : ಈಗ ಲೋಕಸಭಾ ಚುನಾವಣೆ ನಡೆದ್ರೆ ಇಂಡಿಯಾ ಬಣಕ್ಕೆ 208 ಸ್ಥಾನಗಳು ; ಮೋದಿ ನೇತೃತ್ವದ ಎನ್ಡಿಎಗೆ ಎಷ್ಟು ಸ್ಥಾನ ಸಿಗಲಿದೆ ಗೊತ್ತೆ ?
