ಮೂಡಲಗಿ: ಭಾರತದ ಉಪರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರನ್ನು ನವದೆಹಲಿಯಲ್ಲಿ ಕೇಂದ್ರ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸದಲ್ಲಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಭೇಟಿಯಾಗಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಖ್ಯಾತ ಚಲನಚಿತ್ರ ನಟರು ಹಾಗೂ ರಾಜ್ಯಸಭಾ ಸಂಸದರಾದ ಜಗ್ಗೇಶ್, ನಾರಾಯಣಸಾ ಭಾಂಡಗೆ, ಕೆ. ನಾರಾಯಣ ಸೇರಿದಂತೆ ಕರ್ನಾಟಕ, ಆಂದ್ರಪ್ರದೇಶ ಹಾಗೂ ತಮಿಳನಾಡು ರಾಜ್ಯಗಳ ಸಂಸದರು ಉಪಸ್ಥಿತರಿದ್ದರು.