ಬೆಳಗಾವಿ : ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ
ಮಹಿಳಾ ಸೈನ್ಯ ಕಟ್ಟಿದ ಬೆಳಗಾವಿ ಜಿಲ್ಲೆಯ ಬೆಳವಡಿಯ ವೀರರಾಣಿ ಬೆಳವಡಿ ಮಲ್ಲಮ್ಮಳ ಹೆಸರಿನಲ್ಲಿ ಒಂದು ಲಕ್ಷ ರೂ. ಮೊತ್ತದ ಗಡಿನಾಡ ಚೇತನ ಪ್ರಶಸ್ತಿಯನ್ನು
ನೀಡಲು ಕರ್ನಾಟಕ ಗಡಿ ಪ್ರದೇಶ
ಅಭಿವೃದ್ದಿ ಪ್ರಾಧಿಕಾರವು ನಿರ್ಧರಿಸಿದೆ.
ಕಳೆದ ಮೇ 6 ರಂದು ಬೆಂಗಳೂರಿನಲ್ಲಿ
ನಡೆದ ಪ್ರಾಧಿಕಾರದ ಸಭೆಯಲ್ಲಿ
ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ ಅವರು ಮಂಡಿಸಿದ ನಿರ್ಣಯವನ್ನು ಇತ್ತೀಚೆಗೆ ನಡೆದ ಸಭೆಯು ಸಭೆಯಲ್ಲಿ ದೃಢೀಕರಿಸಲಾಗಿದೆ.
ಹೊರ ರಾಜ್ಯಗಳ ಮತ್ತು ಹೊರ
ದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಈ ಪ್ರಶಸ್ತಿಯನ್ನು
ಪ್ರತಿವರ್ಷವೂ ನೀಡಲಾಗುವದು. ಈ ವರೆಗೆ
ಮೂವರು ಮಹನೀಯರ ಹೆಸರಿನಲ್ಲಿ ಗಡಿನಾಡ ಚೇತನ ಪ್ರಶಸ್ತಿಗಳನ್ನು ನೀಡಲಾಗುತ್ತಿತ್ತು. ಇನ್ನು ಮುಂದೆ
ಬೆಳವಡಿ ಮಲ್ಲಮ್ಮ ಮತ್ತು ರಾಣಿ ಅಬ್ಬಕ್ಕದೇವಿ ಹೆಸರಿನಲ್ಲಿ ಮತ್ತೆ ಎರಡು ಪ್ರಶಸ್ತಿಗಳನ್ನು ನೀಡಲು ಪ್ರಾಧಿಕಾರದ
ಅಧ್ಯಕ್ಷ ಸೋಮಣ್ಣ ಬೇವಿನಮರದ
ಅವರ ಅಧ್ಯಕ್ಷತೆಯಲ್ಲಿ ತೀರ್ಮಾನಿಸಲಾಗಿದೆ.