ಮೂಡಲಗಿ: ಮಠ ಮಂದಿರಗಳು ಭಾರತೀಯರ ಶ್ರದ್ದಾ ಕೇಂದ್ರಗಳಾಗಿದ್ದು ಅಂತಹ ಶ್ರದ್ದಾ ಕೇಂದ್ರಗಳ ಮೇಲೆ ಇತ್ತಿಚಿಗೆ ಅಪಪ್ರಚಾರ ಮಾಡುವ ಮೂಲಕ ನಮ್ಮ ನಂಬಿಕೆಯನ್ನು ಬುಡಮೇಲು ಮಾಡುವ ಕೃತ್ಯಗಳು ನಡೆಯುತ್ತಿವೆ ಅದಕ್ಕೆ ಉದಾಹರಣೆ ಎಂದರೇ ಧರ್ಮಸ್ಥಳದ ಇತ್ತಿಚಿನ ಘಟನಾವಳಿಗಳು. ಹೀಗಾಗಿ ಗ್ರಾಮಗಳಲ್ಲಿರುವ ಎಲ್ಲ ದೇವಸ್ಥಾನಗಳು, ಮಠ ಮಂದಿರಗಳ ಒಂದು ಆಧ್ಯಾತ್ಮಿಕ ಮತ್ತು ಪಾರಮಾರ್ಥಿಕ ಪರಂಪರೆಯನ್ನು ಮುಂದುವರಿಸಿಕೊAಡು ಹೊಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಹೇಳಿದರು.
ರವಿವಾರ ಆ 17 ರಂದು ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಮುನ್ಯಾಳ ಗ್ರಾಮದಲ್ಲಿ ಮಹಾಲಕ್ಷ್ಮೀ ಸಮುದಾಯ ಭವನಕ್ಕೆ ರೂ. 10 ಲಕ್ಷ, ಪಟಗುಂದಿ ಗ್ರಾಮದ ಜಡಿಸಿದ್ದೇಶ್ವರ ಸಮುದಾಯ ಭವನಕ್ಕೆ ರೂ. 10 ಲಕ್ಷ ಹಾಗೂ ಜೊಕಾನಟ್ಟಿ ಗ್ರಾಮದ ಪಾಂಡುರAಗ ಸಮುದಾಯ ಭವನಕ್ಕೆ 10 ಲಕ್ಷ ರೂ.ಗಳು ಸೇರಿದಂತೆ ಈ ಮೂರು ಗ್ರಾಮಗಳಲ್ಲಿ ಸುಮಾರು 30 ಲಕ್ಷ ರೂ.ಗಳ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.
ಕಳೆದ 5 ವರ್ಷಗಳಲ್ಲಿ ಮೂಡಲಗಿ ತಾಲೂಕಿನ ಯಾವುದೇ ಗ್ರಾಮಗಳು ಉಳಿಯಲಾರದ ರೀತಿ ನಾನು ಸಂಸದರ ಅನುದಾನವನ್ನು ವಿನಿಯೋಗ ಮಾಡಿದ್ದೇನೆ. ಬರುವಂತಹ ದಿನಗಳಲ್ಲಿ ಇನ್ನೂ ಅನುದಾನ ಪಡೆಯಲಾರದ ಗ್ರಾಮಗಳಿಗೂ ಕೂಡಾ ಅನುಧಾನ ನೀಡುವ ಸಂಕಲ್ಪ ಮಾಡಿದ್ದೇನೆ. ತಾವುಗಳು ಸರ್ಕಾರದ ಯೋಜನೆಯ ಅನುಧಾನ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಮುನ್ಯಾಳ ಗ್ರಾಮದ ಪ್ರಮುಖರಾದ ಶಂಕರ ಗೋಡಿಗೌಡರ, ಬಾಬುಗೌಡ ನಾಯ್ಕ, ವೆಂಕಪ್ಪ ಒಂಟಗೂಡಿ, ಬಾಳಾಸಾಹೇಬ ನಾಯ್ಕ, ಕೆ.ಎಚ್. ನಾಗರಾಜ, ಧರೆಪ್ಪ ಕುಡಚಿ, ಬಸಪ್ಪ ಗೋಡಿಗೌಡರ, ಶ್ರೀ ಹಣಮಂತ ಗೋಡಿಗೌಡರ, ಮಲ್ಲಪ್ಪ ಗೋಡಿಗೌಡರ ಗುರುನಾಥ ಪಾಟೀಲ ಪಟಗುಂದಿ ಗ್ರಾಮದ ಪ್ರಮುಖರಾದ ಬಸಗೌಡ ಪಾಟೀಲ, ಶಂಕರ್ ಗೌಡ ಪಾಟೀಲ, ಕೆಂಪಣ್ಣ ಪಾಟೀಲ, ರವಿ ಹಂಜಿ, ತವಣಪ್ಪ ಹೊಸಮನಿ, ರೇವಪ್ಪ ತುಪ್ಪದ, ವಿಠ್ಠಲ ತುಪ್ಪದ, ಮಹಾಂತೇಶ ಪಾಟೀಲ, ಶಿವಾನಂದ್ ಪಾಟೀಲ, ಮಲ್ಲಿಕಾರ್ಜುನ್ ಮಂಗಿ, ಕಾಮನಾಯಕ್ ನಾಯ್ಕ್, ಸಂತೋಷ್ ಪಾಟೀಲ, ಮಲ್ಲಪ್ಪ ಪಾಟೀಲ, ಮಾಣಿಕ್ ನಂದಗಾAವ, ಜೋಕಾನಟ್ಟಿ ಗ್ರಾಮದ ಪ್ರಮುಖರಾದ ನಾರಾಯಣ ಸನದಿ, ಕುಬೇಂದ್ರ ತೆಗ್ಗಿ, ಉಮೇಶ ಜಡಗಪ್ಪಗೋಳ, ಷಣ್ಮುಖ ಕಂಬಳಿ, ಸಿದ್ದಪ್ಪ ಮೊಕಾಶಿ, ಅರ್ಜುನ್ ಸುಲ್ತಾನಪುರ, ಗುರು ಗಂಗಣ್ಣವರ, ಚಂದ್ರಕಾAತ ಬಿದರಿ, ಯಲ್ಲಪ್ಪ ಗುಜನಟ್ಟಿ, ಬಾಳಪ್ಪ ಹುದ್ದಾರ, ಲಕ್ಷ್ಮಣ ಮಾದರ, ಸಿದ್ದಗೌಡ ¯ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಈರಣ್ಣ ಕಡಾಡಿ
