ದೆಹಲಿ :
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರಣೆ ಇಂದಿಗೆ ಮುಂದೂಡಲ್ಪಟ್ಟಿದೆ. ಆದರೆ, ಇಂದು ವಿಚಾರಣೆ ನಡೆಯುವುದು ಅನುಮಾನ. ಮುಂದಿನ ವಾರ ಈ ವಿವಾದ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಇಂದು ಅರ್ಜಿ ಲಿಸ್ಟ್ ನಲ್ಲಿ ಇದೆ. ಆದರೆ,
ತ್ರಿಸದಸ್ಯ ಪೀಠದ ನ್ಯಾ.ಕೆ.ಎಂ.ಜೋಸೆಫ್ ಜಲ್ಲಿಕಟ್ಟು ಕ್ರೀಡೆಗೆ ಸಂಬಂಧಿಸಿದ ಪೀಠದಲ್ಲಿ ಇದ್ದಾರೆ. ಇದರ ವಿಚಾರಣೆ ಇಂದು ನಡೆಯುವ ಸಾಧ್ಯತೆ ಇದೆ. ಹೀಗಾಗಿ ಉಭಯ ರಾಜ್ಯಗಳ ಗಡಿ ವಿವಾದ ಮುಂದಿನ ವಾರ ನಡೆಯಬಹುದು.
ಬೆಳಗಾವಿ ಗಡಿ ವಿವಾದದ ಬಗ್ಗೆ ಉಭಯ ರಾಜ್ಯಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ವಿವಾದದ ಅಂತಿಮ ತೀರ್ಪು ಹೊರಬರಲಿದೆಯೇ ಎಂಬ ಚರ್ಚೆ ನಡೆಯುತ್ತಿದೆ. ಆದರೆ, ನ್ಯಾಯಾಲಯದಲ್ಲಿ ಈಗ ನಡೆಯುವುದು ವಿಚಾರಣೆಯಷ್ಟೆ. ಗಡಿ ವಿವಾದವನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ಪರಿಗಣಿಸಬಹುದೆ ಎಂಬ ವಿಚಾರ ಮೊದಲು ನಿರ್ಧರಿತವಾಗುತ್ತದೆ. ಒಂದು ವೇಳೆ ಸುಪ್ರೀಂ ಕೋರ್ಟ್ ತನ್ನ ವ್ಯಾಪ್ತಿಗೆ ಇದು ಬರುವುದಿಲ್ಲ, ಸಂಸತ್ತಿಗೆ ಇದನ್ನು ನಿರ್ಧರಿಸುವ ಪರಮ ಅಧಿಕಾರ ಎಂದು ಹೇಳಿ ಮಹಾರಾಷ್ಟ್ರದ ಅರ್ಜಿ ವಜಾಗೊಳಿಸಿದರೆ ಆ ರಾಜ್ಯದ ಪಾಲಿಗೆ ದೊಡ್ಡ ಹಿನ್ನಡೆಯಾಗಲಿದೆ. ಹೀಗಾಗಿ ಸುಪ್ರೀಂ ಕೋರ್ಟ್ ವಿಚಾರಣೆ ಕುತೂಹಲ ಕೆರಳಿಸಿದೆ.