ಬೆಳಗಾವಿ : ಭಾರತದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹನೀಯರು ಸ್ವಾತಂತ್ರ್ಯ ಎಂಬ ಪದಕ್ಕಿಂತ ಸ್ವರಾಜ್ಯ ಎಂಬ ಪದವನ್ನು ಬಳಸಿದ್ದಾರೆ. ಅಂದು ಸ್ವರಾಜ್ಯ ಮತ್ತು ಸಮನ್ವಯತೆ ಇವು ಸ್ವಾತಂತ್ರ್ಯ ಹೋರಾಟದ ಮೂಲ ಮಂತ್ರವಾಗಿದ್ದವು. ಸ್ವಾತಂತ್ರ್ಯಾನಂತರ ನಾವು ವಿಜ್ಞಾನ ತಂತ್ರಜ್ಞಾನದಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿ ಸಮೃದ್ಧ ಭಾರತವನ್ನು ಕಟ್ಟಿದ್ದೇವೆ. ಸ್ವಾತಂತ್ರ್ಯ ಸಂಗ್ರಾಮದ ಸಂದಭ೯ದಲ್ಲಿ ಆಂತರಿಕ ಬೇಧ ಮರೆತು ನಡೆಸಿದ ಹೋರಾಟದಿಂದ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಯಿತು.
ಇಂದು ಪ್ರತಿಯೊಬ್ಬರಲ್ಲೂ ಸ್ವಾತಂತ್ರ್ಯ, ಸ್ವಾಭಿಮಾನ ಮತ್ತು ಆಂತರಿಕ ಸಮನ್ವಯತೆಯ ಅರಿವು ಮೂಡಿಸಿದಾಗ ಮಾತ್ರ ಭಾರತವನ್ನು ಆಂತರಿಕವಾಗಿ ಮತ್ತು ಬಾಹ್ಯವಾಗಿ ಇನ್ನಷ್ಟು ಸಶಕ್ತವಾಗಿ ಸದೃಢ ರಾಷ್ಟ್ರವನ್ನು ಕಟ್ಟಬಹುದು ಎಂದು ಪ್ರೊ.ಎಂ.ಜಿ.ಹೆಗಡೆ ಹೇಳಿದರು.
ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ೭೯ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ, ಮುಖ್ಯ ಗ್ರಂಥಪಾಲಕರು ಪ್ರೊ. ವಿನಾಯಕ ಬಂಕಾಪುರ ಮಾತನಾಡಿ, ಸ್ವತಂತ್ರ ಭಾರತ ಇಂದು ವಿಜ್ಞಾನ ಮತ್ತು ತಂತ್ರಜ್ಞಾನ, ಚಂದ್ರಯಾನ, ಡಿಜಿಟಲ್ ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರದಲ್ಲಿ, ಅಂತರಾಷ್ಟ್ರೀಯ ಸಂಬಂಧ ಸಾಧಿಸುವಲ್ಲಿ ಅಮೋಘ ಸಾಧನೆಗೈದು ಪ್ರಪಂಚದ ಹಲವು ಮುಂದುವರಿದ ರಾಷ್ಟ್ರಗಳನ್ನು ನಿಬ್ಬೆರಗೊಳಿಸಿದ್ದು ಹೆಮ್ಮೆಯ ಸಂಗತಿಯಾಗಿದೆ. ಅಂದು ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸು ಇಂದು ನನಸಾಗಿವೆ. ಅಂದಿನ ಸ್ವಾತಂತ್ರ್ಯ ಹೋರಾಟಗಾರ ತ್ಯಾಗ, ಬಲಿದಾನ ಮತ್ತು ಸ್ವತಂತ್ರ್ಯಾನಂತರ ನವ ಭಾರತ ನಿಮಾ೯ತೃಗಳ ಪರಿಶ್ರಮ ವ್ಯಥ೯ವಾಗದಂತೆ ದೇಶ ಮುನ್ನಡೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂದು ಕರೆ ನೀಡಿದರು.
೭೯ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಭಾಷಣ ಮತ್ತು ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮೊನಕಾ “ಪ್ರಚಲಿತ ಭಾರತದ ಸವಾಲುಗಳು ಹಾಗೂ ಭವಿಷ್ಯತ್ತಿನ ಕನಸುಗಳ” ಕುರಿತು ಮಾತನಾಡಿದರು. ಸ್ವಯಂ. ಟಿ ದೇಶಭಕ್ತಿಗೀತೆಯನ್ನು ಹಾಡಿದರು. ಸಮಾರಂಭದಲ್ಲಿ ಮಹಾವಿದ್ಯಾಲಯದ ಬೋಧಕ-ಬೋಧಕೇತರು ಉಪಸ್ಥಿತರಿದ್ದರು. ಸೌಮ್ಯಾ ತಾಳೂಕರ ಸ್ವಾಗತಿಸಿದರು. ಹಷಿ೯ತಾ ಮರಳಿ ನಿರೂಪಿಸಿದರು. ಲಕ್ಷ್ಮಿ ಹೊನಗೌಡರ ವಂದಿಸಿದರು.