ಬೆಳಗಾವಿ : ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ )ಮಹಾವಿದ್ಯಾಲಯದಲ್ಲಿ ರಸಾಯನ ಶಾಸ್ತ್ರ ಮತ್ತು ಭೌತಶಾಸ್ತ್ರ ವಿಭಾಗದಿಂದ “ಇತ್ತೀಚಿನ ಬೆಳವಣಿಗೆಯಲ್ಲಿ ವಸ್ತು ವಿಜ್ಞಾನ ಮತ್ತು ತಂತ್ರಜ್ಞಾನಗಳು ” ಎಂಬ ವಿಷಯದ ಮೇಲೆ ಎರಡು ದಿನದ ರಾಷ್ಟ್ರೀಯ ಕಾರ್ಯಗಾರ ವನ್ನು ದಿನಾಂಕ 13/08/2025 ರಂದು ಬೆಳಿಗ್ಗೆ 9:30 ಕ್ಕೆ ಬೆಳಗಾವಿ ಜೆ ಎನ್ ಎಂ ಸಿ ಡಾ. ಬಿ ಎಸ್ ಕೊಡ್ಕಣಿ ಸಭಾಂಗಣದಲ್ಲಿ ಉದ್ಘಾಟನೆ ಮಾಡಲಾಗುವುದು.
ಕಾರ್ಯಕ್ರಮಕ್ಕೆ ಮುಖ್ಯ ಉದ್ಘಾಟಕರಾಗಿ ಬೆಂಗಳೂರು ಸಿಎನ್ ಎಂ ಎಸ್ ಜೈನ್ ವಿಶ್ವವಿದ್ಯಾಲಯದ ಹಿರಿಯ ನಿರ್ದೇಶಕ ಪ್ರೊ. ಎಸ್.ಕೆ.ನಟರಾಜ್ ಅವರು ಉದ್ಘಾಟಿಸಿ ಮಾತನಾಡಲಿದ್ದಾರೆ.
ಪ್ರಥಮ ದಿನದ 2ನೇ ಅಧಿವೇಶನದ ಸಂಪನ್ಮೂಲ ವ್ಯಕ್ತಿ ಪ್ರೊ. ಶುಭಾಂಕುಮಾರ್ ಬೋಸ್ ಅವರು “ಸಿ -ಬಿ ಬಂಧ ರಚನೆಗೆ ಸುಸ್ಥಿರ ವಿಧಾನ ಭೂಮಿಯಿಂದ ಸಮೃದ್ಧವಾಗಿರುವ ವೇಗ ವರ್ಧನೆಯಿಂದ ಲೋಹ ಮುಕ್ತ ವ್ಯವಸ್ಥೆಗಳ “ವರೆಗೆ ಈ ಈ ವಿಷಯ ಕುರಿತು ಮಾತನಾಡಲಿದ್ದಾರೆ.
ಮಧ್ಯಾಹ್ನ 2ರಿಂದ 3 ಗಂಟೆ ವರೆಗೆ ಪ್ರೊ ಸಿ ಎಂ ನಾಗರಾಜ್ ಅವರು “ಕೈಗಾರಿಕಾ ಅನ್ವಯ್ಕೆಗಳಿಗೆ ಹೈಡ್ರೋ ಜನ್, ನಿರ್ಜಲೀಕರಣ ಮತ್ತು ಜೋಡಣೆ ಕ್ರಿಯೆಗೆ ನ್ಯಾನೋ ಆಧಾರಿತ ವೇಗವರ್ಧಕಗಳು ” ಎಂಬ ವಿಷಯ ಕುರಿತು ಮಾತನಾಡಲಿದ್ದಾರೆ.
3:15 ರಿಂದ 4:15 ವರೆಗೆ ಪ್ರೊ ಮಹೇಶ ಪದಕಿ ಅವರು “ದ್ರವ – ದ್ರವ ಬೇರ್ಪಡಿಕೆಗಾಗಿ ” ಎಂಬ ವಿಷಯ ಕುರಿತು ಮಾತನಾಡಲಿದ್ದಾರೆ.
•ಎರಡನೆಯ ದಿನದ ಕಾರ್ಯಾಗಾರ ವಿವರ•
ದಿನಾಂಕ 14/08/2025 ರಂದು ಮುಂಜಾನೆ 9:45ರಿಂದ 11:00ಗಂಟೆಯ ವರೆಗೆ ಪ್ರೊ ಸಿದ್ದಪ್ಪ ಪಾಟೀಲ ಅವರು “ವೇಗವರ್ಧಕ ಮತ್ತು ಜೈವಿಕ ಅಧ್ಯಯನಗಳಲ್ಲಿ ಸಂಭಾವ್ಯ ಅನ್ವಯ್ಕೆಗಳಿಗಾಗಿ ನ್ಯಾನೋ ವೇಗವರ್ಧಕಗಳು” ಎಂಬ ವಿಷಯದ ಮೇಲೆ ಸಾದರ ಪಡಿಸುತ್ತಾರೆ.
11:15 ರಿಂದ12:00ರ ವರೆಗೆ ಪ್ರೊ ದೇಬಾಸಿಸ್ ಘೋಷ್ ಅವರು “ಸುಧಾರಿತ ಎಲೆಕ್ಟ್ರೋ ಕೆಮಿಕಲ್ ಶಕ್ತಿ ಸಂಗ್ರಹನೆ ಮೂಲಭೂತ ಅಂಶಗಳಿಂದ ವಸ್ತು ಇಂಜಿನಿಯರಿಂಗ್” ವರೆಗಿನ ಒಳನೋಟಗಳು” ಎಂಬ ವಿಷಯದ ಮೇಲೆ ಪ್ರಸ್ತುತಪಡಿಸುತ್ತಾರೆ.
12:00 ರಿಂದ 1:00ಗಂಟೆ ವರೆಗೆ ಡಾ ಪ್ರಮೋದ್ ಕುಪ್ಪೆ ಅವರು “ಶಕ್ತಿ ಸಂಗ್ರಹಣೆ ಮತ್ತು ಪರಿವರ್ತನೆ ಅನ್ವಯಿಕೆಗಳಿಗಾಗಿ 2 D ನ್ಯಾನೋ ಕಾಂಪೋಸಿಟ್ ಗಳು” ಎಂಬ ವಿಷಯದ ಮೇಲೆ ಮಾತನಾಡಲಿದ್ದಾರೆ.
ಮಧ್ಯಾಹ್ನ 2:00 ರಿಂದ 3:00ವರೆಗೆ ಪ್ರೊ ಶ್ರೀನಿವಾಸ್ ಬುದುಗುಂಪಿ ಅವರು “ಕಾರ್ಬನ್ ಗಳ ಜೈವಿಕ ಚಿತ್ರಣ, ಜೈವಿಕ ಆರ್ಗ್ಯಾನೊ ಮೆಟಲಿಕ್ ರಸಾಯನಶಾಸ್ತ್ರ” ಎಂಬ ವಿಷಯದ ಮೇಲೆ ಸಾದರ ಪಡಿಸಲಿದ್ದಾರೆ.
ಸಾಯಂಕಾಲ 3:15 ರಿಂದ 4:15ವರೆಗೆ ಪ್ರೊ ಅಕ್ಷಯ ಸಮಲ್ ಅವರು “ಪರಿಸರ ಮತ್ತು ಶಕ್ತಿಗಾಗಿ ಅನಿಸೊಟ್ರೊಪಿಕ್ ನ್ಯಾನೋ ಸ್ಟ್ರಕ್ಚರ್ ಗಳ ವಿನ್ಯಾಸ ಮತ್ತು ಬಹುರೂಪ ಇಂಜಿನಿಯರಿಂಗ್” ಎಂಬ ವಿಷಯದ ಮೇಲೆ ಪ್ರಸ್ತುತ ಪಡಿಸಲಿದ್ದಾರೆ.
ಈ ಅಧಿವೇಶದಲ್ಲಿ ಅಧ್ಯಾಪಕರು , ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧಗಳನ್ನು ಪ್ರಸ್ತುತಿಗಳಿಸಲಿದ್ದಾರೆ.
ಈ ಎರಡು ದಿನದ ಕಾರ್ಯಾಗಾರಕ್ಕೆ ವಿವಿಧ ರಾಜ್ಯಗಳಿಂದ ಪ್ರತಿನಿಧಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಾಲೇಜಿನ ಪ್ರಾಚಾರ್ಯೆ ಡಾ. ಜ್ಯೋತಿ ಕವಳೇಕರ್ ಮತ್ತು ಕಾರ್ಯಕ್ರಮದ ಸಂಯೋಜಕ ಡಾ. ಸತೀಶ ಎಂ ಪಿ ಹಾಗೂ ಸಂಘಟನ ಕಾರ್ಯದರ್ಶಿ ಡಾ . ವಿನಯ್ ಕುಮಾರ್ ಎಂ. ಕೋರಿದ್ದಾರೆ.