ಬೆಳಗಾವಿ : ಕಾಕತಿಯ ಶ್ರೀ ಹರಿವಾಯು ಗುರುಗಳ ಸೇವಾ ಸಂಘದವರು ಆ.11 ಹಾಗೂ 12 ರಂದು ಎರಡು ದಿನಗಳ ಕಾಲ ರಘು ಪ್ರಮೋದ ಸಭಾಗೃಹದಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 354 ನೇ ಆರಾಧನಾ ಮಹೋತ್ಸವವನ್ನು ಹಮ್ಮಿಕೊಂಡಿದ್ದಾರೆ.
11 ರಂದು ಬೆಳಿಗ್ಗೆ 11 ಕ್ಕೆ ಪಂ. ಸಂಜೀವಾಚಾರ್ಯ ವಾಳ್ವೇಕರ ಅವರಿಂದ ಪ್ರವಚನ. ಸಂಜೆ 6 ಕ್ಕೆ ಅಶ್ವಿನಿ ಸರಣೋಬತ್, ಗಜಾನನ ಕುಲಕರ್ಣಿ, ಸಂವಾಧಿನಿ ಕಟ್ಟಿ ಇದರಿಂದ ಕೀರ್ತನೆ.
12 ರಂದು ಬೆಳಗ್ಗೆ 10:30 ಕ್ಕೆ ಸತ್ಯನಾರಾಯಣ ಪೂಜೆ, ಸಂಜೆ ಪಂ. ಪ್ರಮೋದಾಚಾರ್ಯ ಕಟ್ಟಿ ಮತ್ತು ಪಂ. ಶ್ರೀನಿಧಿ ಜಮನೀಸಾಚಾರ್ಯರಿಂದ ಪ್ರವಚನ
ಪ್ರತಿದಿನ ಬೇರೆ ಬೇರೆ ಸ್ಪರ್ಧೆಗಳು, ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ, ಮಂಗಳಾರತಿ, ಮಹಾಪ್ರಸಾದ ವಿರುತ್ತದೆ.
ಗಾಡಿಕೊಪ್ಪ:
ಖಾನಾಪುರ ತಾಲ್ಲೂಕಿನ ಗಾಡಿಕೊಪ್ಪ ಗ್ರಾಮದಲ್ಲಿ ದಿ. ಕಲ್ಲೊಪಂತ ಪಾಟೀಲರು ಸ್ಥಾಪಿಸಿದ ಶ್ರೀ ಗುರುರಾಜ ಮಂದಿರoದಲ್ಲಿ 11 ಹಾಗೂ 12 ರಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 354 ನೇ ಆರಾಧನಾ ಮಹೋತ್ಸವವನ್ನು ಹಮ್ಮಿಕೊಂಡಿದ್ದಾರೆ.
ಸಂಕೀರ್ತನೆ, ಮಹಾಪ್ರಸಾದ, ಅಷ್ಟೊತ್ತರ, ಪಂಚಾಮೃತ ಅಭಿಷೇಕ, ಪ್ರವಚನ, ಸಂಗೀತ ಸೇವೆ,ರಥೋತ್ಸವವಿರುವುದಾಗಿ ಅಚ್ಯುತಾಚಾರ್ಯ ಕೆ. ಪಾಟೀಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.