ಕೊಲ್ಲಾಪುರ: ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಶನಿವಾರ ಕೊಲ್ಲಾಪುರದ ತಾರಾಬಾಯಿ ಪಾರ್ಕ್ ನಲ್ಲಿರುವ ಪ್ರಸಿದ್ಧ ‘ಗೋಕುಲ್’ ಹಾಲಿನ ಘಟಕದ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು.
ಗೋಕುಲ್ ಪ್ಲಾಂಟ್ ನ ಇತಿಹಾಸ ಹಾಗೂ ಅದರ ಕಾರ್ಯ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದರು.
ಇದೇ ವೇಳೆ, ದಿವಂಗತ ಆನಂದರಾವ್ ಪಾಟೀಲ ಅವರು ಗೋಕುಲ್ ಮಿಲ್ಕ್ ಪ್ಲಾಂಟಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ, ಗೌರವ ಸೂಚಿಸಿದರು.
ಈ ಸಂದರ್ಭದಲ್ಲಿ ಗೋಕುಲ್ ಮಿಲ್ಕ್ ಪ್ಲಾಂಟ್ ನ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ನಿರ್ದೇಶಕರಾದ ವಿಶ್ವಾಸ್ ಪಾಟೀಲ, ನಿರ್ದೇಶಕರುಗಳಾದ ಶಶಿಕಾಂತ ಪಾಟೀಲ (ಚುಯೇಕರ್), ಬಾಳಾಸಾಹೇಬ್ ಖಾಡೆ, ಆರ್.ಕೆ.ಮೋರೆ ಮುಂತಾದವರು ಉಪಸ್ಥಿತರಿದ್ದರು.