ಸಿರುಗುಪ್ಪ: ತಾಲ್ಲೂಕಿನ ಬಾಗೇವಾಡಿ ಗ್ರಾಮದ ಹೊರಭಾಗದಲ್ಲಿ ಕುರಿ ತರುಬುವ ಹಟ್ಟಿಯಿಂದ 17 ಕುರಿಗಳು ಕಳ್ಳತನವಾಗಿರುವ ಘಟನೆ ಮಂಗಳವಾರ ನಡೆದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಚೀಕಲ್ ವಾಲ್ ಗ್ರಾಮದ ಕುರಿಗಾಹಿ ಮಲ್ಲಪ್ಪ ವಿಠಪ್ಪ ನಿಂಗಗೋಳ ಅವರಿಗೆ ಸೇರಿದ ಕುರಿಮಂದೆಯಿಂದ ₹2.04 ಲಕ್ಷ ಮೌಲ್ಯದ 17 ಕುರಿಗಳನ್ನು ಅಪರಿಚಿತರು ಕಳ್ಳತನ ಮಾಡಿರುವುದಾಗಿ ಸಿರುಗುಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.