ಬೆಳಗಾವಿ: ಬೆಳಗಾವಿ ನಗರ ಕಾನೂನು ಮತ್ತು ವ್ಯವಸ್ಥೆಯ ನೂತನ ಡಿಸಿಪಿಯಾಗಿ ನಾರಾಯಣ ಬರಮನಿಯವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಮತ್ತೆ ಬೆಳಗಾವಿಗೆ ಅಧಿಕಾರಿಯಾಗಿ ಬಂದಿರುವುದು ಸಂತಸವಾಗಿದೆ. ಮುಂದಿನ ದಿನಗಳಲ್ಲಿ ಬೆಳಗಾವಿಯಲ್ಲಿ ಇನ್ನಷ್ಟು ದಕ್ಷ ರೀತಿಯಲ್ಲಿ ಕಾನೂನು ವ್ಯವಸ್ಥೆ ನಿಭಾಯಿಸಲು ಪ್ರಯತ್ನಿಸುವುದಾಗಿ ಅವರು ತಿಳಿಸಿದರು.
ನಾರಾಯಣ ಬರಮನಿ ಅವರು ಈ ಮೊದಲು ಬೆಳಗಾವಿಯಲ್ಲಿ ದಶಕಗಳ ಕಾಲ ಪೊಲೀಸ್ ಅಧಿಕಾರಿಯಾಗಿ ಹೆಸರುವಾಸಿಯಾಗಿದ್ದರು.