ಬಾಗಲಕೋಟೆ: ಕೂಡಲಸಂಗಮ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಪೀಠದ ಟ್ರಸ್ಟ್ಗೆ ಸೇರಿದ ಕಟ್ಟಡವನ್ನು ಕೆಲವರು ಅಕ್ರಮವಾಗಿ ಪ್ರವೇಶಿಸಿ, ಗೇಟ್ ಹಾಗೂ ಮಠದ ಕಟ್ಟಿಗೆ ಬಾಗಿಲುಗಳ ಕೀಲಿ ಮುರಿದಿದ್ದಾರೆ ಎಂದು ಹುನಗುಂದ ಪೊಲೀಸ್ ಠಾಣೆಯಲ್ಲಿ ಚಂದ್ರಶೇಖರ ಚಿತ್ತರಗಿ ಎಂಬುವವರು ದೂರು ನೀಡಿದ್ದಾರೆ.
ಭಾನುವಾರ ರಾತ್ರಿ ಮನೆಗೆ ಬಂದಿದ್ದ ಮಲ್ಲನಗೌಡ ಪಾಟೀಲ ಹಾಗೂ ಬಾಬುಗೌಡ ಪಾಟೀಲ ಪೀಠದ ಕೀಲಿ ನೀಡುವಂತೆ ಒತ್ತಾಯಿಸಿ ಜೀವ ಬೆದರಿಕೆ ಹಾಕಿದ್ದರು.
ಜೇವರ್ಗಿ ತಾಲ್ಲೂಕಿನ ಕುಳಗೇರಿಯ ಮಲ್ಲನಗೌಡ ಪಾಟೀಲ, ಯಡ್ರಾಮಿಯ ಬಾಬುಗೌಡ ಪಾಟೀಲ, ಚಂದ್ರಶೇಖರ ದೇವಲಾಪುರ, ಸುರೇಶ ಹೊಸಪೇಟೆ, ಚೌಗಲಸಾ ಇನ್ನಿತರರು ಸೇರಿ ಪೀಠದ ಒಳಗಡೆ ಹೋಗಿ, ಮುಖ್ಯ ಗೇಟ್, ಮಠದ ಕಟ್ಟಿಗೆ ಬಾಗಿಲು ಕೀಲಿ ಮುರಿದು ಅತಿಕ್ರಮವಾಗಿ ಒಳ ಪ್ರವೇಶಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.