ಎಜ್ಬಾಸ್ಟನ್: ಭಾರತ ತಂಡದ ನಾಯಕ ಸೊಗಸಾದ ದ್ವಿಶತಕ ಬಾರಿಸುವ ಮೂಲಕ ಈಗ ಭಾರತದ ಬ್ಯಾಟಿಂಗ್ ಬಲವನ್ನು ಮತ್ತಷ್ಟು ಭದ್ರಪಡಿಸಿದ್ದಾರೆ. ಪ್ರಥಮ ಟೆಸ್ಟ್ ನಲ್ಲಿ ಸಹ ಅವರು ಸೊಗಸಾದ ಶತಕ ಬಾರಿಸಿದ್ದರು. ಇದೀಗ ಎರಡನೇ ಟೆಸ್ಟ್ ನಲ್ಲೂ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತನೆ ಮಾಡಿದ್ದಾರೆ. ಭಾರತದ ಟೆಸ್ಟ್ ಕ್ರಿಕೆಟ್ ನಾಯಕ ಶುಭಮನ್ ಗಿಲ್, ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ದ್ವಿಶತಕದ ಸಾಧನೆ ಮಾಡಿದ್ದಾರೆ.
ಎಜ್ಬಾಸ್ಟನ್ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಗಿಲ್ ಸ್ಮರಣೀಯ ಸಾಧನೆ ಮಾಡಿದ್ದಾರೆ.
ಭಾರತ ಟೆಸ್ಟ್ ತಂಡದ ನಾಯಕರಾಗಿ ಆಯ್ಕೆಯಾದ ಬಳಿಕ ಎರಡನೇ ಪಂದ್ಯದಲ್ಲೇ ಗಿಲ್ ದ್ವಿಶತಕ ಗಳಿಸಿದ್ದಾರೆ. ಲೀಡ್ಸ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಗಿಲ್ ಶತಕ ಗಳಿಸಿದ್ದರು.
ಆಂಗ್ಲರ ಬೌಲರ್ಗಳನ್ನು ಸಮರ್ಥವಾಗಿ ದಂಡಿಸಿದ 25 ವರ್ಷದ ಗಿಲ್, ಅಮೋಘ ಸಾಧನೆ ಮಾಡಿದ್ದಾರೆ. ಗಿಲ್ 311 ಎಸೆತಗಳಲ್ಲಿ ದ್ವಿಶತಕ ಗಳಿಸಿದ್ದಾರೆ. ಗಿಲ್ ಆಕರ್ಷಕ ಇನಿಂಗ್ಸ್ನಲ್ಲಿ 21 ಬೌಂಡರಿ ಹಾಗೂ 2 ಸಿಕ್ಸರ್ ಸೇರಿವೆ. ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ ದೇಶಗಳಲ್ಲಿ ಶತಕ ಗಳಿಸಿದ ಏಷ್ಯಾದ ನಾಯಕ ಎಂಬ ಖ್ಯಾತಿಗೂ ಗಿಲ್ ಭಾಜನರಾಗಿದ್ದಾರೆ. ದ್ವಿ ಶತಕದ ನಂತರ ಅವರ ಬ್ಯಾಟಿಂಗ್ ವೈಭವ ಮತ್ತಷ್ಟು ಬಿರುಸಾಗಿದ್ದು ಎಷ್ಟು ರನ್ ಗಳಿಸುತ್ತಾರೆ ಕಾದು ನೋಡಬೇಕಾಗಿದೆ.
ಭಾರತದ ನಾಯಕನಾಗಿ ಟೆಸ್ಟ್ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ
23y 39d – MAK ಪಟೌಡಿ ವಿರುದ್ಧ ENG, ದೆಹಲಿ, 1964
25y 298d – ಶುಭ್ಮನ್ ಗಿಲ್ vs ENG, ಎಡ್ಜ್ಬಾಸ್ಟನ್, 2025
26 ವರ್ಷ 189 ದಿನ – ಸಚಿನ್ ತೆಂಡೂಲ್ಕರ್ vs ನ್ಯೂಜಿಲೆಂಡ್, ಅಹಮದಾಬಾದ್, 1999
27 ವರ್ಷ 260 ದಿನಗಳು – ವಿರಾಟ್ ಕೊಹ್ಲಿ vs ವಿಂಡೀಸ್, ನಾರ್ತ್ ಸೌಂಡ್, 2016
ಇಂಗ್ಲೆಂಡ್ನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ನಾಯಕರೊಬ್ಬರು 11 ದ್ವಿಶತಕಗಳನ್ನು ಬಾರಿಸಿದ್ದಾರೆ (ಆತಿಥೇಯರಿಗೆ ನಾಲ್ಕು, ಪ್ರವಾಸಿ ತಂಡಗಳಿಗೆ ಏಳು). 2003 ರಲ್ಲಿ ಎಡ್ಜ್ಬಾಸ್ಟನ್ ಮತ್ತು ಲಾರ್ಡ್ಸ್ನಲ್ಲಿ ನಡೆದ ಸತತ ಟೆಸ್ಟ್ ಪಂದ್ಯಗಳಲ್ಲಿ 277 ಮತ್ತು 259 ರನ್ ಗಳಿಸಿದ ಗ್ರೇಮ್ ಸ್ಮಿತ್ ಮಾತ್ರ ಗಿಲ್ಗಿಂತ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದರು. ಮೊದಲ ಬಾರಿಗೆ 22 ವರ್ಷ, 175 ದಿನಗಳು ವಯಸ್ಸಾಗಿತ್ತು.