ಮೂಡಲಗಿ: ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಶಕ್ತಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಸರ್ಕಾರ ಮಹಿಳೆಯರಿಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ ಉಚಿತ ಪ್ರಯಾಣದ ಕಾರಣದಿಂದಾಗಿ ಅತಿ ಹೆಚ್ಚು ಪ್ರಯಾಣಿಕರು ಇವತ್ತು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದು ಬಸ್ ಪ್ರಯಾಣದ ಮೇಲೆ ಅವಲಂಬಿತರಾಗಿರುವ ಪುರುಷ ಪ್ರಯಾಣಿಕರು. ಶಾಲಾ ವಿದ್ಯಾರ್ಥಿಗಳು ಸಾಕಷ್ಟು ತೊಂದರೆಗೊಳಗಾಗಿದ್ದಾರೆ ಮತ್ತು ಸರ್ಕಾರದಲ್ಲಿ ಅನುದಾನ ಇಲ್ಲದ ಕಾರಣ ಪ್ರಯಾಣಿಕರ ತಂಗುದಾನಗಳನ್ನು ನಿರ್ಮಾಣ ಮಾಡಲು ಕೂಡಾ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಂಸದರ ನಿಧಿಯಲ್ಲಿ ಜಿಲ್ಲೆಯ ಹಲವಾರು ಗ್ರಾಮಗಳಿಗೆ ನಾನು ಬಸ್ ಪ್ರಯಾಣಿಕರ ತಂಗುದಾನಗಳನ್ನು ನಿರ್ಮಿಸಿ ಕೊಡುತ್ತಿದ್ದು ಸಾರ್ವಜನಿಕರ ಇದರ ಅನುಕೂಲ ಪಡೆದುಕೊಳ್ಳಬೇಕೆಂದು ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಹೇಳಿದರು.
ಅರಭಾವಿ ವಿಧಾನಸಭಾ ಮತಕ್ಷೇತ್ರದ ಕಳ್ಳಿಗುದ್ದಿ, ಮನ್ನಿಕೇರಿ, ಬಗರನಾಳ, ಗೋಸಬಾಳ ಗ್ರಾಮಗಳಲ್ಲಿ ರಾಜ್ಯಸಭಾ ಸಂಸದರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಲ್ಲಿ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.
ಸಂಸದರ ನಿಧಿಯು ಗ್ರಾಮೀಣ ಪ್ರದೇಶ ಜನರ ಅಗತ್ಯಗಳನ್ನು ತಕ್ಷಣ ಪೂರೈಸುವ ಒಂದು ಅಕ್ಷಯ ಪಾತ್ರೆಯಾಗಿದ್ದು ಈ ನಿಧಿ ಅಡಿಯಲ್ಲಿ ಈಗಾಗಲೇ ಶಿಕ್ಷಣ ಕ್ಷೇತ್ರದಲ್ಲಿ ಸ್ಮಾರ್ಟ್ ಕ್ಲಾಸ್, ಆರೋಗ್ಯ ಕ್ಷೇತ್ರದಲ್ಲಿ, ಜಿಮ್, ಆಂಬುಲೆನ್ಸ್, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಮುದಾಯ ಭವನ, ಸಂಗೀತ ಕ್ಷೇತ್ರದಲ್ಲಿ ರಂಗ ಮಂದಿರ, ಪ್ರಯಾಣಿಕರಿಗೆ ಬಸ್ ತಂಗುದಾಣ ಹೀಗೆ ಹಲವಾರು ರೀತಿಯ ಕೆಲಸಗಳನ್ನು ಒದಗಿಸಿ ಕೊಡುವ ಮೂಲಕ ಗ್ರಾಮೀಣ ಜನರ ಸಹಾಯಕ್ಕೆ ಬರುತ್ತಾ ಇದ್ದಿನಿ ಎಂದರಲ್ಲದೇ ನಮ್ಮ ಗ್ರಾಮೀಣ ಭಾಗದ ರೈತರು ಮತ್ತು ಕೂಲಿಕಾರರು ತಾಲೂಕಾ ಕೇಂದ್ರಗಳಿಗೆ ಹೊಗಿ ಬರಲು ಬಸ್ಗಾಗಿ ದಾರಿ ಕಾಯುವ ಜನರಿಗೆ ಅನುಕೂಲವಾಗುವ ದೃಷ್ಠಿಯಿಂದ ಬಸ್ ಪ್ರಯಾಣಿಕರ ತಂಗುದಾನ ನಿರ್ಮಾಣ ಮಾಡಲಾಗುತ್ತಿದೆ ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಂಸದ ಈರಣ್ಣ ಕಡಾಡಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಕಳ್ಳಿಗುದ್ದಿ ಗ್ರಾಮದ ಎಲ್. ಆರ್. ಕಮಲದಿನ್ನಿ, ಎಲ್. ಆರ್. ಸಂತ್ರಿ, ಲಕ್ಷ್ಮಣ ಹಿರಡ್ಡಿ, ಹನುಮಂತ ಹಿರಡ್ಡಿ, ಗ್ರಾ.ಪಂ ಅಧ್ಯಕ್ಷರಾದ ಲಕ್ಷ್ಮಣ ಚನ್ನಾಳ, ಭೀಮಶೆಪ್ಪ ಸಿಂತ್ರಿ, ಸಿದ್ದಪ್ಪ ಬಿಸಗುಪ್ಪಿ, ಬಸವರಾಜ ಗಾಡವಿ, ಬಸವರಾಜ ಅಂಗಡಿ, ಮನ್ನಿಕೇರಿ ಗ್ರಾಮದ ಯಲ್ಲಪ್ಪ ನಾಯ್ಕರ, ಮಹಾಂತೇಶ ದಳವಾಯಿ, ಮುತ್ತೆಪ್ಪ ನಾಂವಿ, ಮಹಾಂತೇಶ ಹಿರೇಮಠ, ವಿಠ್ಠಲ ನಾಯ್ಕರ, ಹಣಮಂತ ಗಡಾದ, ಬಗರನಾಳ ಬಸಪ್ಪ ಗೌಡರ, ರಾಮಪ್ಪ ತೋಟಗಿ, ಭೀಮಪ್ಪ ಇಳಿಗಾರ, ಬಸಪ್ಪ ಬಸಿಡೊಣಿ, ಯಮನಪ್ಪ ಹಾವಾಡಿ, ರಾಜು ಗೌಡರ, ಗೋಸಬಾಳ ಗ್ರಾಮದ ಬಸಪ್ಪ ಸುಳನ್ನವರ, ಕಲ್ಲಪ್ಪ ಪೂಜೇರಿ, ಗಂಗಯ್ಯ ಹಿರೇಮಠ, ಮಾರುತಿ ಗೌಡರ, ಹೊಳೆಪ್ಪ ಮಠದ, ಲಕ್ಷ್ಮಣ ಬೆಳ್ಳಿಕೇರಿ, ಪುಂಡಲಿಕ ಬೆಣ್ಣಿ, ಪ್ರಕಾಶ ಪಾಟೀಲ, ಅಶೋಕ ಭಜಂತ್ರಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಈರಣ್ಣ ಕಡಾಡಿ
