ಬೆಂಗಳೂರು : ಧಾರವಾಡ ಎಎಸ್ಪಿ ಸ್ವಯಂಪ್ರೇರಿತ ನಿವೃತ್ತಿಯನ್ನು ನಾವು ಅಕ್ಸೆಪ್ಟ್ ಮಾಡುವುದಿಲ್ಲ, ಅವರಿಗೆ ಮತ್ತೆ ಪೋಸ್ಟಿಂಗ್ ಕೊಡುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಬರಮನಿ ಅವರು ಸ್ವಯಂ ನಿವೃತ್ತಿಗೆ ಮುಂದಾಗಿರುವುದಕ್ಕೆ ರಾಜ್ಯದಲ್ಲೆಡೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಸಚಿವರು ಮಹತ್ವದ ಹೇಳಿಕೆ ನೀಡಿದ್ದಾರೆ.
ಧಾರವಾಡ ಎಎಸ್ಪಿ ಸ್ವಯಂಪ್ರೇರಿತ ನಿವೃತ್ತಿಯನ್ನು ನಾವು ಅಕ್ಸೆಪ್ಟ್ ಮಾಡುವುದಿಲ್ಲ, ಅವರಿಗೆ ಮತ್ತೆ ಪೋಸ್ಟಿಂಗ್ ಕೊಡುತ್ತೇವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಧಾರವಾಡ ಎಎಸ್ಪಿ ನಾರಾಯಣ ಬರಮನಿಯವರಿಗೆ ಮತ್ತೆ ಪೋಸ್ಟಿಂಗ್ ಮಾಡುತ್ತೇವೆ. ನಾರಾಯಣ್ ಅವರ ಸ್ವಯಂಪ್ರೇರಿತ ನಿವೃತ್ತಿ ತೆಗೆದುಕೊಳ್ಳುವುದಿಲ್ಲ. ನಾನು ಹಾಗೂ ಹೆಚ್.ಕೆ ಪಾಟೀಲ್ ಅವರ ಜೊತೆ ಮಾತಾಡಿದ್ದೇವೆ. ಅವರು ಹಾಗೇನೂ ಮಾಡಲ್ಲ. ಅವರಿಗೆ ಪೋಸ್ಟಿಂಗ್ ಕೊಡ್ತವೆ ಎಂದಿದ್ದಾರೆ. ಇನ್ನು ಸಿಎಂ ಆವತ್ತು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಬರಮನಿ ಅವರಿಗೆ ಬೈದಿರಲಿಲ್ಲ. ಆ ಸಂದರ್ಭಕ್ಕೆ ಸಿಎಂ ಹಾಗೆ ನಡೆದುಕೊಂಡಿದ್ದಾರೆ ಎಂದರು.