ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ 30 ವರ್ಷ ಜೈಲುವಾಸ ..!
ನ್ಯಾಯಾಧೀಶೆ ಪುಷ್ಪಲತಾ ಫನಿಶಮೆಂಟ್ ಗೆ ಪಾತಾಳಕ್ಕೆ ಕುಸಿದ ಕಾಮುಕ..!
PSI ಅವಿನಾಶ ಶ್ರಮದ ಫಲಕ್ಕೆ ಆರೋಪಿಗೆ ಆಯ್ತು ಕಠಿಣ ಶೀಕ್ಷೆ..!
ಬೆಳಗಾವಿ : ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಆರೋಪಿತನಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ಬೆಳಗಾವಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಇಂದು ಪ್ರಕಟಗೊಳಿಸಿದೆ.
ಬೆಳಗಾವಿ ತಾಲೂಕಿನ ಗುಗ್ರೇನಟ್ಟಿ ಗ್ರಾಮದ 33 ವರ್ಷದ ಬಸವರಾಜ ಮಾರುತಿ ಶಿಂದೋಳಕರ ಶಿಕ್ಷೆಗೋಳಗಾದ ಅಪರಾಧಿ.
2021 ರಲ್ಲಿ ಕಾಕತಿ ಪೋಲಿಸ ಠಾಣಿಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಕಾಕತಿ ಪೋಲಿಸ ಠಾಣೆಯ ಗುನ್ನಾ ನಂ॥ 32/2021 ಕಲಂ.363 376 ಐಪಿಸಿ ಮತ್ತು ಪೋಕ್ಸೋ ಕಾಯ್ದೆ ಕಲಂ. 4, 6, ಯಡಿಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದ ಸ್ಪಶೇಲ್ ಕೇಸ್ ನಂ 238/2021 ರಡಿ ಪ್ರಕರಣದ ವಿಚಾರಣೆಯಾಗಿ ಶಿಕ್ಷೆ ಪ್ರಕಟಗೊಂಡಿದೆ.
ಫಿರ್ಯಾದಿದಾರರ ಮಗಳು ನೊಂದ ಬಾಲಕಿ ಇವಳು ಅಪ್ರಾಪ್ತ ವಯಸ್ಸಿನವಳು ಅಂತಾ ಗೋತ್ತಿದರೂ ಆರೋಪಿ ಬಸವರಾಜ ಮಾರುತಿ ಶಿಂದೋಳಕರ ವಯಸ್ಸು 33 ವರ್ಷ ಸಾ ಗುಗ್ರೆನಟ್ಟಿ ತಾ:- ಜಿಲ್ಲಾ- ಬೆಳಗಾವಿ ಅವನು ದಿನಾಂಕ 01-03-2021 ರಂದು ಬಾಲಕಿಗೆ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಮಾಡುವ ಉದ್ದೇಶದಿಂದ ಪೋನ್ ಮಾಡಿ ಎಲ್ಲಿಯಾದರೂ ಹೋಗುವಾ ಬಾ ಅಂತಾ ಕಡೋಲಿ ಗ್ರಾಮದಿಂದ ಅಪಹರಣ ಮಾಡಿಕೊಂಡು ಭೂತರಾಮನಹಟ್ಟಿ ಗ್ರಾಮಹದ್ದಿಯಲ್ಲಿರುವ ಒಬ್ಬರ ಹೋಲದಲ್ಲಿನ ದನ ಕಟ್ಟುವ ಮನೆಯ ಬಾಜು ಒಂದು ಕೋಣಿಯಲ್ಲಿ ಕರೆದುಕೊಂಡು ಹೋಗಿ ದಿನಾಂಕ 01-03-2021 ರಿಂದ 18-08-2021 ರವರೆಗೆ ಬಲವಂತದಿಂದ ಲೈಂಗಿಕ ಅತ್ಯಾಚಾರ ಮಾಡಿದ್ದ.
ಈ ಅಪರಾಧಕ್ಕೆ ದಾಖಲಾಧಿಕಾರಿಯಾಗಿ PSI ಅವಿನಾಶ ಎ ಯರಗೋಪ್ಪ ಇವರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
PI ಆರ್ ಹೆಚ್ ಹಳ್ಳೂರ ಇವರು ಪ್ರಕರಣವನ್ನು ದಾಖಲಿಸಿ ನಂತರ ತನಿಖೆಯನ್ನು ಕೈಕೊಂಡು ಪ್ರಕರಣವನ್ನು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಹೆಚ್ಚುವರಿ ಜಿಲ್ಲಾ & ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯ-01 ಬೆಳಗಾವಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಧೀಶರಾದ ಶ್ರೀಮತಿ ಸಿ, ಎಮ್, ಪುಷ್ಪಲತಾ ಇವರು ಪ್ರಕರಣವನ್ನು ವಿಚಾರಣೆ ಮಾಡಿ, ಒಟ್ಟು 07 ಸಾಕ್ಷಿಗಳ ವಿಚಾರಣೆ ಮೇಲಿಂದ ಹಾಗೂ, 46 ದಾಖಲೆಗಳು, ಹಾಗೂ ಮುದ್ದೆಮಾಲಗಳ ಆಧಾರದ ಮೇಲಿಂದ ಆರೋಪಿ ಬಸವರಾಜ ಮಾರುತಿ ಶಿಂದೋಳಕರ ವಯಸ್ಸು 33 ವರ್ಷ ಸಾ ಗುಗ್ರೇನಟ್ಟಿ ತಾ:- ಜಿಲ್ಲಾ:- ಬೆಳಗಾವಿ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು ತೀರ್ಪು ನೀಡಿ, ಆರೋಪಿತನಿಗೆ 30 ವರ್ಷಗಳ ಕಠಿಣ ಕಾರಾಗೃಹ ಶೀಕ್ಷೆ & ರೂ 10,,000/- ರೂಪಾಯಿ ದಂಡ ವಿಧಿಸಿ ಪ್ರಕರಣದ ತೀರ್ಪು ನೀಡಿದ್ದು. ಮತ್ತು ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂಪಾಯಿ 4, ಲಕ್ಷ ‘ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಸಿರುತ್ತದೆ. ಪರಿಹಾರ ಹಣವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ 05 ವರ್ಷಗಳವರೆಗೆ ಮುದ್ದು ಠೇವಣಿಯಾಗಿ ಇಡಲು ಮಾನ್ಯ ನ್ಯಾಯಾಲಯವು ಆದೇಶ ಮಾಡಿರುತ್ತಾರೆ. & ಆರೋಪಿ ನಂ 02 ನಾಮದೇವ ಯಲ್ಲಪ್ಪಾ ದುಡುಮ್ಮ ವಯಸ್ಸು 35 ವರ್ಷ ಸಾ ಹೋನಗಾ ತಾ ಜಿಲ್ಲಾ ಬೆಳಗಾವಿ ಇವನಿಗೆ ಪ್ರಕರಣದಿಂದ ಬಿಡುಗಡೆ ಮಾಡಿ ಆದಶಿಸಿರುತ್ತಾರೆ.
ಪ್ರಕರಣದಲ್ಲಿ ಸರಕಾರದ ಪರವಾಗಿ ಎಲ್. ವಿ ಪಾಟೀಲ, ವಿಶೇಷ ಸರ್ಕಾರಿ ಅಭಿಯೋಜಕರಾಗಿ ವಾದ ಮಂಡಿಸಿ ಅಪರಾಧಿಗೆ ಕಠಿಣ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೋಕ್ಸೋ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಶ್ರಮದಿಂದ ತನಿಖೆ ನಡಿಸಿರುವ ಕಾಕತಿ ಪಿಎಸ್ಐ ಅವಿನಾಶ, PI ಹಾಗೂ ತಂಡವನ್ನು ಪೊಲೀಸ್ ಆಯುಕ್ತ ಭೂಷಣ ಬೊರಸೆ ಶ್ಲಾಘಿಸಿದ್ದಾರೆ.