ಬೆಳಗಾವಿ: ಶಿವಬಸವ ನಗರದ ಪಾಲಿಟೆಕ್ನಿಕ್ ಹಳೇ ಕ್ವಾರ್ಟಸ್ ಬಳಿ ಶುಕ್ರವಾರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಒಬ್ಬನನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗ್ಯಾಂಗವಾಡಿಯ ಧೀರಜ್ ಶ್ರೀನಿವಾಸ ಚೌಗಲೆ ಬಂಧಿತ. ಆತನಿಂದ ರೂ.26 ಸಾವಿರ ಮೌಲ್ಯದ 1.314 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ರಾಮನಗರದ ಧರ್ಮನಾಥ ಭವನ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಶುಕ್ರವಾರ ಗಾಂಜಾ ಮಾರುತ್ತಿದ್ದ ಗ್ಯಾಂಗವಾಡಿಯ ಕುಲಕುಲೆ ಚೌಗಲೆ ಎಂಬಾತನನ್ನು ಬಂಧಿಸಿ, ರೂ.25 ಸಾವಿರ ಮೌಲ್ಯದ 1.112 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.