ಮಂಗಳೂರು: ಅಹಮದಾಬಾದ್ ವಿಮಾನ ಅಪಘಾತದಲ್ಲಿ
ಮಂಗಳೂರು ಮೂಲದ ಪೈಲಟ್ ಡ್ರೈವ್ ಕುಂದರ್ ಮೃತಪಟ್ಟಿ ದ್ದಾರೆ. ಪತನಗೊಂಡ ಏರ್ ಇಂಡಿಯಾ ವಿಮಾನದ ಕೋ ಪೈಲಟ್ ಆಗಿದ್ದ ಕ್ಲೈವ್ ಕುಂದರ್, ಫಸ್ಟ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕ್ಯಾಪ್ಟನ್ ಕ್ಲೈವ್ ಕುಂದರ್ ಮಂಗಳೂರು ಮೂಲದವರಾದರೂ, ಅವರ ಕುಟುಂಬ ಈಗ ಮುಂಬೈನಲ್ಲಿ ನೆಲೆಸಿದೆ.
ಇಂದು ಘಟನಾ ಸ್ಥಳಕ್ಕೆ ಪ್ರಧಾನಿ ಮೋದಿ
ಅಹಮದಾಬಾದ್: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಅಹಮದಾಬಾದ್ಗೆ ಪ್ರಧಾನಿ
ನರೇಂದ್ರ ಮೋದಿ ಶುಕ್ರವಾರ ಭೇಟಿ ನೀಡುತ್ತಿದ್ದಾರೆ. ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಹಮದಾಬಾದ್ಗೆ ಭೇಟಿ ನೀಡಿದ್ದು ಪರಿಹಾರ ಕಾರ್ಯ ಪರಿಶೀಲಿಸಿದ್ದಾರೆ. ಅದರ ಬೆನ್ನಲ್ಲೇ ಮೋದಿ ಗುಜರಾತ್ ಗೆ ಭೇಟಿ ನೀಡಲು ಮುಂದಾಗಿದ್ದಾರೆ. ಭೇಟಿ ವೇಳೆ ಘಟನಾ ಸ್ಥಳ, ಆಸ್ಪತ್ರೆಗೆ ಪ್ರಧಾನಿ ಭೇಟಿ ನೀಡಲಿದ್ದಾರೆ.