ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಿಂದ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ 123 ಲ್ಯಾಪ್ ಟಾಪ್ ಖರೀದಿಯಲ್ಲಿನ ಅವ್ಯವಹಾರದ ಕುರಿತು ಪ್ರಕರಣದಲ್ಲಿ ಭಾಗಿಯಾದ ಬೆಳಗಾವಿಯ ರಾಜೇಶ್ ಎಂಟರ್ ಪ್ರೈಸಸ್ ಮೇಲೆ ತನಿಖೆ ನಡೆಸುವಂತೆ ಆಗ್ರಹಿಸಿ ಡಾ.ಬಿ.ಆರ್. ಅಂಬೇಡ್ಕರ್ ಶಕ್ತಿ ಸಂಘದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಲಾಯಿತು.
ಲ್ಯಾಪ್ ಟಾಪ್ ಟೆಂಡರ್ ಪ್ರಕ್ರಿಯೆಯಲ್ಲಿ ಲ್ಯಾಪ್ ಟಾಪ್ ಸರಬರಾಜುದಾರರಿಗೆ M/S ರಾಜೇಶ ಎಂಟರ್ ಪ್ರೈಸಸ್ ನವರಿಗೆ ಆದೇಶ ನೀಡಲಾಗಿತ್ತು. ಟೆಂಡರ್ ಪ್ರಕಾರ ಸರಬರಾಜುದಾರರು ಲ್ಯಾಪ್ ಟಾಪ್ ಗಳನ್ನು ಕೊಡಬೇಕಾಗಿತ್ತು. ಟೆಂಡರ್ Specification ಪ್ರಕಾರ ಸರಬರಾಜುದಾರರು HP IP/Laptop ಜೊತೆಗೆ Licensed and Are Loaded windows 11 Pro Licence ಜೊತೆಗೆ ನೀಡಬೇಕಿತ್ತು.
ಆದರೆ ಸರಬರಾಜುದಾರರು ಅಂದಾಜು 15 ರಿಂದ 20 ಸಾವಿರ ಕಡಿಮೆ ದರದಲ್ಲಿ ಸಿಗುವ freedos O/S Laptop ಅನ್ನು ಸರಬರಾಜು ಮಾಡಿದ್ದಾರೆ. ಆದರೆ ಲ್ಯಾಪ್ ಟಾಪ್ ಸಾಫ್ಟ್ ವೇರ್ ನಲ್ಲಿ ಹಾಕದೆ (ಪೈರೆಟೆಡ್) ಇಲ್ ಲೀಗಲ್ ಸಾಫ್ಟ್ ವೇರ್ ಹಾಕಿ ಒಟ್ಟು 20 ಲಕ್ಷ ರೂಪಾಯಿ ಗಳನ್ನು ಮಹಾನಗರ ಪಾಲಿಕೆ ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳಿಗೆ ಸಿಗುವ ಲ್ಯಾಪ್ ಟಾಪ್ ವಿತರಣೆ ಹಣದಲ್ಲಿ ಈ ಸಮುದಾಯದ ವಿದ್ಯಾರ್ಥಿಗಳಿಗೆ ಮೋಸ ಮಾಡಿದ್ದಾರೆ. ಹಣದ ವ್ಯವಹಾರ ನಡೆದಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ವಿದ್ಯಾರ್ಥಿಗಳಿಗೆ ತೀರಾ ಕಳಪೆಮಟ್ಟದ ವಿತರಣೆ ಮಾಡುವ ಮೂಲಕ ರಾಜೇಶ್ ಎಂಟರ್ ಪ್ರೈಸಸ್ ಬಹುದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಎಸಗಿರುವುದು ಕಂಡು ಬಂದಿದೆ. ಈಗಾಗಲೇ ಬೆಳಗಾವಿ ಮಹಾನಗರ ಪಾಲಿಕೆ ಲ್ಯಾಪ್ ಟಾಪ್ ಸರಬರಾಜುದಾರರಿಗೆ ಹಣ ಸಂದಾಯ ಮಾಡಿದ್ದು ಕಂಡು ಬಂದಿದೆ. ಬೆಳಗಾವಿ ಜಿಲ್ಲಾ ಎನ್ ಐಸಿ ಅಧಿಕಾರಿಗಳು ಲ್ಯಾಪ್ ಟಾಪ್ ಸಾಮರ್ಥ್ಯದ ಬಗ್ಗೆ ಮತ್ತು ಗುಣಮಟ್ಟ ಪರೀಕ್ಷೆ ಹಾಗೂ ಪರಿಶೀಲನೆ ಮಾಡದೆ ರಾಜೇಶ್ ಎಂಟರ್ ಪ್ರೈಸಸ್ ಸರಬರಾಜುದಾರರಿಗೆ ಕೊಟ್ಟಿ ದೃಢೀಕೆಣ ಪ್ರಮಾಣ ಪತ್ರ ವಿತರಿಸಿದ್ದಾರೆ.
ಈ ಬಗ್ಗೆ ಮಹಾನಗರ ಪಾಲಿಕೆ ಈ ಕೂಡಲೇ ಕೂಲಂಕುಶ ತನಿಖೆ ನಡೆಸುವಂತೆ ಒತ್ತಾಯಿಸಿದರು.