ನವದೆಹಲಿ: ಆಪರೇಷನ್ ಸಿಂಧೂರ (Operation Sindoor) ಅಡಿಯಲ್ಲಿ ಮೇ 7ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ಕ್ಕೆ ನುಗ್ಗಿ 9 ಪ್ರಮುಖ ಭಯೋತ್ಪಾದಕ ಉಡಾವಣಾ ಪ್ಯಾಡ್ಗಳ ಮೇಲೆ ನಡೆಸಿದ ನಿಖರ ದಾಳಿದಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆʼʼ ಎಂದು ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕ (DGMO), ಲೆಫ್ಟಿನೆಂಟ್ ಜನರಲ್ ರಾಜೀವ ಘಾಯ್ ಹೇಳಿದ್ದಾರೆ. ಭಾರತ ಯಾವುದೇ ಕಾರಣಕ್ಕೂ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಭಾನುವಾರದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೇ 7ರ ರಾತ್ರಿ 8ರಿಂದ 9ರ ಹೊತ್ತಿಗೆ, ಪಾಕಿಸ್ತಾನದಿಂದ ಕ್ವಾಡ್ಕಾಪ್ಟರ್ಗಳನ್ನು ಸಾರ್ವಜನಿಕರಿಗೆ ಕಿರುಕುಳ ನೀಡಲು ಬಳಸಲಾಯಿತುʼʼ ಎಂದು ತಿಳಿಸಿದರು.
ಇದುವರೆಗೆ ಪಾಕಿಸ್ತಾನ 700 ಡ್ರೋನ್ಗಳನ್ನು ಹೊಡೆದುರಯುಳಿಸಿದ್ದೇವೆ. ಕಾರ್ಯಾಚರಣೆ ವೇಳೆ ಮೇ 7ರಿಂದ 10ರ ತನಕ ಪಾಕಿಸ್ತಾನದ ಸುಮಾರು 40 ಸೈನಿಕರು ಮೃತಪಟ್ಟಿದ್ದಾರೆ. ಪಾಕ್ನ ರಾಡಾರ್ ಕೇಂದ್ರ, ಏರ್ಬೇಸ್ ಧ್ವಂಸಗೊಳಿಸಲಾಗಿದೆʼʼ ಎಂದು ಹೇಳಿದರು. ʼʼಆಪರೇಷನ್ ಸಿಂಧೂರ ವೇಳೆ ಭಾರತದ ಐವರು ಸೈನಿಕರು ಹುತಾತ್ಮರಾಗಿದ್ದು, ಅವರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲʼʼ ಎಂದು ತಿಳಿಸಿದರು. ಅಲ್ಲದೆ, ನಾಶವಾದ ಉಗ್ರರ ನೆಲೆಯ ಚಿತ್ರಗಳನ್ನು ಪ್ರದರ್ಶಿಸಲಾಯಿತು.
ಬಹ್ವಾಲ್ಪುರ ಭಯೋತ್ಪಾದಕ ಶಿಬಿರದಲ್ಲಿ IC814 ವಿಮಾನ ಅಪಹರಣ ಮತ್ತು ಪುಲ್ವಾಮಾ ಸ್ಫೋಟದಲ್ಲಿ ಭಾಗಿಯಾಗಿದ್ದ ಯೂಸುಫ್ ಅಜರ್, ಅಬ್ದುಲ್ ಮಲಿಕ್ ರೌಫ್ ಮತ್ತು ಮುದಾಸಿರ್ ಅಹ್ಮದ್ ಅವರಂತಹ ಹೆಚ್ಚಿನ ನೊಟೊರಿಯಸ್ ಭಯೋತ್ಪಾದಕರು ಸಾವಿಗೀಡಾಗಿದ್ದಾರೆ ಎಂದು ಭಾರತೀಯ ಸಶಸ್ತ್ರ ಪಡೆಗಳು ಒತ್ತಿ ಹೇಳಿವೆ.
ಕೊಲ್ಲಲ್ಪಟ್ಟವರಲ್ಲಿ 1999 ರ ಐಸಿ -814 ಕಂದಹಾರ ವಿಮಾನ ಅಪಹರಣ ಮತ್ತು 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯ ಪ್ರಮುಖ ಸೂತ್ರಧಾರಿಗಳು ಸೇರಿದ್ದಾರೆ. ಭಾರತೀಯ ಪಡೆಗಳ ನಿಖರ ದಾಳಿಯ ನಂತರ ಯೂಸುಫ್ ಅಜರ್, ಅಬ್ದುಲ್ ಮಲಿಕ್ ರೌಫ್ ಮತ್ತು ಮುದಾಸಿರ್ ಅಹ್ಮದ್ ಅವರಂತಹ ನೊಟೊರಿಯಸ್ ಭಯೋತ್ಪಾದಕರು ಕೊಲ್ಲಲ್ಪಟ್ಟರು ಎಂದು ದೃಢಪಡಿಸಲಾಯಿತು.
ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ನ ಸೋದರ ಮಾವ ಯೂಸುಫ್ ಅಜರ್, ಇಂಡಿಯನ್ ಏರ್ಲೈನ್ಸ್ ವಿಮಾನ IC-814 ಅಪಹರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮತ್ತು 2001 ರ ಸಂಸತ್ತಿನ ದಾಳಿಯಲ್ಲೂ ಭಾಗಿಯಾಗಿದ್ದ. ಲಷ್ಕರ್-ಎ-ತೈಬಾ (ಎಲ್ಇಟಿ) ಹಿರಿಯ ಕಮಾಂಡರ್ ಮತ್ತು ಅಮೆರಿಕದಿಂದ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ಅಬ್ದುಲ್ ಮಲಿಕ್ ರೌಫ್ ಮತ್ತು 40 ಸಿಆರ್ಪಿಎಫ್ ಸಿಬ್ಬಂದಿಯನ್ನು ಬಲಿತೆಗೆದುಕೊಂಡ ಪುಲ್ವಾಮಾ ಆತ್ಮಾಹುತಿ ಬಾಂಬ್ ದಾಳಿಯ ಯೋಜನಾಕಾರರಲ್ಲಿ ಒಬ್ಬನೆಂದು ನಂಬಲಾದ ಮುದಾಸೀರ್ ಅಹ್ಮದ್ ಅವರನ್ನು ಸಹ ಹತ್ಯೆ ಮಾಡಲಾಯಿತು ಎಂದು ಘಾಯ್ ತಿಳಿಸಿದರು.
ಭಯೋತ್ಪಾದನೆಯ ಅಪರಾಧಿಗಳು ಮತ್ತು ಯೋಜಕರನ್ನು ಶಿಕ್ಷಿಸುವುದು ಮತ್ತು ಅವರ ಮೂಲಸೌಕರ್ಯಗಳನ್ನು ಕೆಡವುವುದು – ಸ್ಪಷ್ಟ ಮಿಲಿಟರಿ ಉದ್ದೇಶದಿಂದ ಆಪರೇಷನ್ ಸಿಂಧೂರ ಅನ್ನು ವಿನ್ಯಾಸಗೊಳಿಸಲಾಗಿದೆ” ಎಂದು ಲೆಫ್ಟಿನೆಂಟ್ ಜನರಲ್ ಹೇಳಿದರು. ಈ ಕಾರ್ಯಾಚರಣೆಯು ಅಜ್ಮಲ್ ಕಸಬ್ ಮತ್ತು ಡೇವಿಡ್ ಹೆಡ್ಲಿಯಂತಹ ಉಗ್ರಗಾಮಿಗಳ ತಯಾರಿಕೆಯ ತಾಣಗಳೆಂದು ಕರೆಯಲ್ಪಡುವ ಮುರಿಡ್ಕೆ ಮತ್ತು ಬಹವಾಲ್ಪುರ್ ಸೇರಿದಂತೆ ಪ್ರಮುಖ ಭಯೋತ್ಪಾದಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡಿತು ಎಂದು ತಿಳಿಸಿದರು.
ಭಾರತೀಯ ವಾಯುಪಡೆಯು ಪಾಕಿಸ್ತಾನದ ಪ್ರದೇಶದೊಳಗಿನ ಶಿಬಿರಗಳ ಮೇಲೆ ಮಾರ್ಗದರ್ಶಿ ಯುದ್ಧಸಾಮಗ್ರಿಗಳನ್ನು ಬಳಸಿ ನಿಖರವಾದ ವಾಯುದಾಳಿಗಳನ್ನು ನಡೆಸಿತು. ಇದರಿಂದಾಗಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಕನಿಷ್ಠ ಹಾನಿಯಾಗಿದೆ. ಮೇ 8 ಮತ್ತು 9 ರ ರಾತ್ರಿ ಪಾಕಿಸ್ತಾನ ನಡೆಸಿದ ಸಂಘಟಿತ ಡ್ರೋನ್ ಮತ್ತು ಯುಎವಿ ದಾಳಿಯನ್ನು ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿದವು ಎಂದು ಏರ್ ಮಾರ್ಷಲ್ ಎ.ಕೆ. ಭಾರತಿ ಹೇಳಿದರು.
ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸೇನೆಯು 35-40 ಸೈನಿಕರನ್ನು ಕಳೆದುಕೊಂಡಿದೆ ಎಂದು ವರದಿಯಾಗಿದೆ, ಆದರೆ ಗಡಿಯಾಚೆಗಿನ ಗುಂಡಿನ ದಾಳಿಯಲ್ಲಿ ಭಾರತ ಐದು ಸೈನಿಕರನ್ನು ಕಳೆದುಕೊಂಡಿದೆ. ಭಯೋತ್ಪಾದನೆಯ ಬಗ್ಗೆ ಭಾರತದ ಶೂನ್ಯ ಸಹಿಷ್ಣುತೆಯ ನಿಲುವನ್ನು ಮತ್ತು ರಾಷ್ಟ್ರೀಯ ಭದ್ರತೆಗೆ ಯಾವುದೇ ಬೆದರಿಕೆಯ ವಿರುದ್ಧ ಪೂರ್ಣ ಬಲದಿಂದ ಪ್ರತಿಕ್ರಿಯಿಸಲು ಅದರ ಸಿದ್ಧತೆಯನ್ನು ಸೇನೆ ಪುನರುಚ್ಚರಿಸಿತು.
ಪಾಕಿಸ್ತಾನ ಸೇನೆಯು ಹಲವಾರು ನಾಗರಿಕರು, ಜನವಸತಿ ಹಳ್ಳಿಗಳು ಮತ್ತು ಗುರುದ್ವಾರಗಳಂತಹ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು, ಇದರಿಂದಾಗಿ ಜೀವಹಾನಿ ಸಂಭವಿಸಿತು.